Monday, May 19, 2025
Homeಸುದ್ದಿಸಚಿನ್ ತೆಂಡೂಲ್ಕರ್ ಪುತ್ರಿಯೂ.. ಶುಬ್‌ಮನ್ ಗಿಲ್ಲೂ...

ಸಚಿನ್ ತೆಂಡೂಲ್ಕರ್ ಪುತ್ರಿಯೂ.. ಶುಬ್‌ಮನ್ ಗಿಲ್ಲೂ…

ಕ್ರಿಕೆಟ್‌ ದಂತ ಕತೆ ಸಚಿನ್‌ ತೆಂಡೂಲ್ಕರ್‌ ಮಗಳು ಸಾರಾ ತೆಂಡೂಲ್ಕರ್‌ ಮತ್ತು ಯುವ ಕ್ರಿಕೆಟಿಗ ಶುಭ್‌ಮನ್‌ ಗಿಲ್‌ ನಡುವೆ ಪ್ರೀತಿ ಟಿಸಿಲೊಡೆದಿದೆ ಎಂಬ ರೂಮರ್‌ ವರ್ಷದ ಹಿಂದೆಯೇ ಹರಡಿತ್ತು. ಇದೀಗ ಅದು ರೂಮರ್‌ ಅಲ್ಲ ಸತ್ಯ ಎಂಬ ಹಂತಕ್ಕೆ ಬಂದಿದೆ.

ಸಚಿನ್‌– ಅಂಜಲಿ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳು ಇದ್ದಾರೆ. ಮಗ ಅರ್ಜುನ್ ತೆಂಡೂಲ್ಕರ್ ಮಗಳು ಸಾರಾ ತೆಂಡೂಲ್ಕರ್. ಮಗಳು ಸಾರಾಗೆ ಮದುವೆ ಮಾಡಲು ಸಚಿನ್‌ ನಿರ್ಧಾರ ಮಾಡಿದ್ದಾರೆ. ಸದ್ಯಕ್ಕೆ ಸಚಿನ್ ತೆಂಡೂಲ್ಕರ್ ಲಂಡನ್ ನಲ್ಲಿ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ. ಅವರ ಮಗಳನ್ನು ಭಾರತದ ಯುವಕನಿಗೆ ಕೊಟ್ಟು ಮದುವೆ ಮಾಡಬೇಕು ಎಂಬ ಆಸೆಯನ್ನು ಹೊಂದಿದ್ದಾರೆ. ಅದಕ್ಕೆ ಪ್ರತಿಯಾಗಿ ಸಚಿನ್ ತೆಂಡೂಲ್ಕರ್ ಮಗಳು ಸಾರಾ ಅವರೂ ಕೂಡ ಡೇಟಿಂಗ್ ಮಾಡುತ್ತಿದ್ದಾರೆ. ಮದುವೆ ನಿಶ್ಚಿತವಾಗಿ ಬಿಟ್ಟರೆ ಎಲ್ಲ ಊಹಪೋಹಗಳಿಗೆ ತೆರೆ ಬೀಳಲಿದೆ.