Saturday, December 14, 2024
Homeರಾಜ್ಯಮಡಿಕೇರಿಗಜಪಯಣಕ್ಕೆ ಭಾಗವಹಿಸಲು ಕೊಡಗಿನಿಂದ ಹೊರಟ ಸಾಕಾನೆಗಳು

ಗಜಪಯಣಕ್ಕೆ ಭಾಗವಹಿಸಲು ಕೊಡಗಿನಿಂದ ಹೊರಟ ಸಾಕಾನೆಗಳು

ಮಡಿಕೇರಿ: ಮೈಸೂರು ದಸರಾ ಮಹೋತ್ಸವಕ್ಕೆ ಮುನ್ನುಡಿ ಬರೆಯುವ ಗಜಪಯಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಲ್ಲಿನ ದುಬಾರೆ ಹಾಗೂ ಹಾರಂಗಿ ಆನೆ ಶಿಬಿರಗಳಿಂದ ನಾಲ್ಕು ಆನೆಗಳು ಗುರುವಾರ ಪ್ರಯಾಣ ಆರಂಭಿಸಿದವು. ಈ ಎರಡೂ ಶಿಬಿರಗಳಲ್ಲಿರುವ ಧನಂಜಯ (45), ಕಂಚನ್ (24), ಗೋಪಿ (41) ಹಾಗೂ ವಿಜಯ (63) ಆನೆಗಳನ್ನು ಸೆ.1ರಂದು ಗಜಪಯಣ ನಡೆಯಲಿರುವ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿ ಗ್ರಾಮದತ್ತ ಮಾವುತರು ಕರೆದುಕೊಂಡು ಹೋದರು. ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಂತರ ಗಜ ಪಡೆಗಳು ಪ್ರಯಾಣ ಆರಂಭಿಸಿದವು.