Monday, May 19, 2025
Homeರಾಜ್ಯಕರಾವಳಿ ಕರ್ನಾಟಕಕುಡಿದ ಮತ್ತಿನಲ್ಲಿ ಟ್ರಕ್ ಚಾಲಕನ ಅವಾಂತರ,

ಕುಡಿದ ಮತ್ತಿನಲ್ಲಿ ಟ್ರಕ್ ಚಾಲಕನ ಅವಾಂತರ,

ಕಂಠಪೂರ್ತಿ ಕುಡಿದ ಲಾರಿ ಚಾಲಕ ಕಂಟೇನರ್ ಟ್ರಕ್ಕನ್ನು ಡಿವೈಡರ್ ಮೇಲೇರಿಸಿ ಅಪಘಾತ ನಡೆಸಿದ ಪರಿಣಾಮ ಕೆಲಕಾಲ ಹೆದ್ದಾರಿಯಲ್ಲಿ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಆಗಮಿಸಿ ವಾಹನ ಸಂಚಾರವನ್ನು ನಿಯಂತ್ರಣ ಗೊಳಿಸುವ ಮಧ್ಯೆ, ಕುಡಿದ ಮತ್ತಿನಲ್ಲಿದ್ದ ಚಾಲಕ ಸಾರ್ವಜನಿಕರೊಂದಿಗೆ ದೊಣ್ಣೆ ಕಲ್ಲು ಹಿಡಿದು ರೌಡಿಸಂ ರೀತಿಯಲ್ಲಿ ವರ್ತಿಸುತ್ತಿದ್ದ ದೃಶ್ಯ ಜನರನ್ನು ಭಯಭೀತಿಗೊಳಿಸಿತ್ತು ಕೆರಳಿದ ಸಾರ್ವಜನಿಕರು ಟ್ರಕ್ ಚಾಲಕನ ಮೇಲೆ ಹಲ್ಲೆಗೆ ಮುಂದಾದಾಗ ತಕ್ಷಣ ಸ್ಥಳಕ್ಕೆ ಆಗಮಿಸಿದ ಆಸಿಫ್ ಆಪತ್ಬಾಂಧವ ಚಾಲಕನನ್ನು ಸಾರ್ವಜನಿಕರ ಕೈಯಿಂದ ರಕ್ಷಿಸಿ ತನ್ನ ವಾಹನದಲ್ಲಿ ಕೂರಿಸಿಕೊಂಡು ಮುಂದೆ ಸಾಗಿದರು. ತದನಂತರ ಪೊಲೀಸರ ಸಲಹೆ ಮೇರೆಗೆ ಚಾಲಕನನ್ನು ಪಣಂಬೂರು ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ತನ್ನ ಸಂಸ್ಥೆಯ ಯಾರ್ಡಿಗೆ ತೆರಳಿ ಮಾಲಕರಿಗೆ ಹಸ್ತಾಂತರಿಸಿದರು.