Saturday, December 14, 2024
Homeರಾಜ್ಯಉತ್ತರ ಕರ್ನಾಟಕಪೆಟ್ರೋಲ್‌ ಬಂಕಿನಲ್ಲಿ ಕಾರಿಗೆ ಬೆಂಕಿ

ಪೆಟ್ರೋಲ್‌ ಬಂಕಿನಲ್ಲಿ ಕಾರಿಗೆ ಬೆಂಕಿ

ಬೆಳಗಾವಿ: ಇಲ್ಲಿನ ಶ್ರೀಕೃಷ್ಣದೇವರಾಯ ವೃತ್ತದ ಬಳಿಯ ಪೆಟ್ರೋಲ್‌ ಬಂಕ್‌ನಲ್ಲಿ ನಿಂತ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬಂಕ್‌ ಸಿಬ್ಬದ ತಕ್ಷಣ ಬೆಂಕಿ ನಂದಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.

ಸ್ವಿಫ್ಟ್‌ ಕಾರಿಗೆ ಡೀಸೆಲ್‌ ಹಾಕಿಸಲು ಚಾಲಕ ಬಂಕಿನ ಆವರಣಕ್ಕೆ ತಂದರು. ಕಾರಿನೊಳಗೆ ಚಾಲಕ ಸೇರಿ ಒಂದೇ ಕುಟುಂಬದ ಐವರು ಪ್ರಯಾಣಿಸುತ್ತಿದ್ದರು. ಡೀಸೆಲ್‌ ಹಾಕಿಸಿದ ಕೆಲವೇ ಸೆಕೆಂಡ್‌ಗಳಲ್ಲಿ ಕಾರಿನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿತು. ಕಾರಿನಲ್ಲಿದ್ದವರು ತಕ್ಷಣ ಹೊರ ಓಡಿದರು. ಅಷ್ಟರಲ್ಲಿ ಕಾರಿನ ಮುಂಭಾಗದ ಬೊನೆಟ್‌ನಲ್ಲಿ ಬೆಂಕಿ ಹೊತ್ತಿಕೊಂಡಿತು.

ಎಚ್ಚೆತ್ತುಕೊಡ ಬಂಕ್‌ ಸಿಬ್ಬಂದಿ ಮೊದಲು ಪೆಟ್ರೋಲ್‌, ಡೀಸೆಲ್‌ ಹಾಕುವ ಯಂತ್ರಗಳನ್ನು ಬಂದ್‌ ಮಾಡಿದರು. ಸುತ್ತಲಿದ್ದ ಇತರ ವಾಹನಗಳನ್ನು ದೂರ ಸರಿಸಿದರು. ಸ್ಥಳದಲ್ಲಿದ್ದ ಸಿಬ್ಬಂದಿ ಅಗ್ನಿನಂದಕ ಬಳಸಿ ಬೆಂಕಿ ನಂದಿಸಲು ಮುಂದಾದರು. ಬುಟ್ಟಿಯಲ್ಲಿ ಮಣ್ಣು ತಂದು ಚೆಲಲಿದರು. ಬಕೀಟ್‌ ಮೂಲಕ ನೀರು ಎರಚಿದರು. ಕೊನೆಗೂ ಕಾರಿನ ಬೆಂಕಿ ನಂದಿತು.

ಬಳಿಕ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರನ್ನು ಪೂರ್ಣಪ್ರಮಾಣದಲ್ಲಿ ತೋಯಿಸಿದರು. ಕಾರಿಗೆ ಬೆಂಕಿ ಹೊತ್ತಿಕೊಂಡ ದೃಶ್ಯ ಬಂಕ್‌ನ ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ.

ಇಲ್ಲಿನ ಶಹಾಪುರದ ಭಾರತ್‌ ನಗರದ ನಿವಾಸಿ ನರೇಂದ್ರ ಭಿರ್ಜೆ ಎನ್ನುವವರಿಗೆ ಸೇರಿದ ಕಾರಿದು. ಡೀಸೆಲ್‌ ಹಾಕಿಸಿದ ಬಳಿಕ ಕಾರನ್ನು ಮತ್ತೆ ಚಾಲೂ ಮಾಡಿದಾಗ, ಬ್ಯಾಟರಿಯಲ್ಲಿ ಕಿಡಿ ಹೊತ್ತಿಕೊಂಡಿರಬಹುದು ಎಂದು ಮೇಲ್ನೋಟಕ್ಕೆ ಕಾಣಸುತತದೆ. ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಲಾಗಿದ್ದು, ತನಿಖೆ ನಡೆಯಲಿದೆ ಎಂದು ಎಪಿಎಂಸಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪೆಟ್ರೊಲ್ ಬಂಕ್ ಸಿಬ್ಬಂದಿಯ ಸಮಯಪ್ರಜ್ಞೆಯನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.