ಚಿತ್ರದುರ್ಗ: ಒಮ್ನಿಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು ಬೆಂಕಿಗೆ ಆಹುತಿಯದ ಘಟನೆ ನಗರದ ಫಿಲ್ಟರ್ ಹೌಸ್ ಸಮೀಪ ನಡೆದಿದೆ. ಎರಡು ದ್ವಿಚಕ್ರ ವಾಹನಗಳಿಗೂ ಹಾನಿಯಾಗಿದೆ.
ಫಿಲ್ಟರ್‌ಹೌಸ್ ಬಡಾವಣೆಯ ಇಸ್ಮಾಯಿಲ್ ಎಂಬುವರಿಗೆ ಸೇರಿದ ಒಮ್ನಿಯಲ್ಲಿ ಅನಿಲ ಸೋರಿಕೆಯಾಗಿ ಏಕಾಏಕಿ ಬೆಂಕಿಹೊತ್ತಿಕೊಂಡು ಸ್ಫೋಟಗೊಂಡಿದೆ. ಯಾವುದ ಪರಣಹಾನಿ ಸಂಭವಿಸಿಲ್ಲ.
ಗಾಬರಿಗೊಂಡ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ತುರ್ತುಸೇವಾ ಸಿಬ್ಬಂದಿ ಬೆಂಕಿ ಆರಿಸಿದ್ದಾರೆ.