ಚಿತ್ರದುರ್ಗ : ಮಕ್ಕಳ ಕಲಿಕೆ ಪರಿಣಾಮಕಾರಿಯಾಗಲು ಶಾಲೆಯಲ್ಲಿ ಶಿಕ್ಷಕರು ನಿಯಮಿತವಾಗಿ ಆಯೋಜಿಸುವ ಸಹಪಠ್ಯ ಚಟುವಟಿಕೆ ಅತೀ ಅವಶ್ಯಕ ಎಂದು ಜೆಎನ್‍ಕೋಟೆ ಸಮೂಹ ಸಂಪನ್ಮೂಲವ್ಯಕ್ತಿ ವೆಂಕಟೇಶರೆಡ್ಡಿ ಹೇಳಿದರು. ಜೋಡಿಚಿಕ್ಕೇನಹಳ್ಳಿಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಶಾಲಾ ಶಿಕ್ಷಣ ಇಲಾಖೆ, ಸ್ಥಳೀಯ ಆಡಳಿತ ಹಾಗೂ ಜೆಎನ್‍ಕೋಟೆ ಕ್ಲಸ್ಟರ್ ಕೇಂದ್ರದ ವತಿಯಿಂದ ಆಯೋಜಿಸಿದ್ದ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು.
ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ನಿಯಮಿತವಾಗಿ ಸಹಪಠ್ಯ ಚಟುವಟಿಕೆ ಕೈಗೊಳ್ಳಲು ಇಲಾಖೆಯ ವತಿಯಿಂದ ಸೂಕ್ತ ಸಹಕಾರ ಮತ್ತು ಪ್ರೋತ್ಸಾಹ ನೀಡಲಾಗುವುದು ಎಂದರು. ಶಾಲಾ ಸಮಿತಿಯ ಅಧ್ಯಕ್ಷ ಆರ್ ತಿಪ್ಪೇಸ್ವಾಮಿ, ಮಾತನಾಡಿ ಪ್ರಾಥಮಿಕ ಹಾಗೂ ಪ್ರೌಢಹಂತದ ವಿದ್ಯಾರ್ಥಿಗಳಿಗೆ ಸೃಜನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಂಡು ಅವರಲ್ಲಿನ ಸುಪ್ತ ಪ್ರತಿಭೆ ಹೊರಗೆಳೆದು ಶಿಕ್ಷಕರು ಮಕ್ಕಳ ಆಸಕ್ತಿಗೆ ಅನುಗುಣವಾಗಿ ಮಾರ್ಗದರ್ಶನ ನೀಡಬೇಕು ಎಂದರು. ಮುಖ್ಯಶಿಕ್ಷಕ ಜಿ ರಂಗಸ್ವಾಮಿ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಹೆಚ್ಚೆಚ್ಚು ಪಠ್ಯ ಸಹಪಠ್ಯ ಚಟುವಟಿಕೆ ಆಯೋಜಿಸಿ ಮಕ್ಕಳಲ್ಲಿನ ಸುಪ್ತ ಪ್ರತಿಭೆ ಹೊರಗೆಳೆದು ಅವು ಬೆಳಗುವಂತೆ ಶಿಕ್ಷಕರು ಪ್ರೇರೇಪಿಸಬೇಕು ಎಂದರು.
ಮುಖ್ಯಶಿಕ್ಷಕ ಎಸ್ ವೆಂಕಟೇಶ ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿ ಉಳ್ಳವರು ಮತ್ತು ಗ್ರಾಮದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸರ್ಕಾರಿ ಶಾಲೆಯಲ್ಲಿ ಕೈಗೊಳ್ಳುವ ಸಹಪಠ್ಯ ಚಟುವಟಿಕೆಗಳಿಗೆ ತನು ಮನ ಧನವನ್ನು ನೀಡಿ ಪ್ರೋತ್ಸಾಹಿಸಬೇಕು ಎಂದರು. ಗ್ರಾಪಂ ಸದಸ್ಯರಾದ ವಿಜಯಮ್ಮತಿಪ್ಪೇಸ್ವಾಮಿ, ಬಾಗಲುವೀರಣ್ಣ, ಸಿಆರ್‍ಪಿ ಶಿವರುದ್ರಪ್ಪ., ಶಿಕ್ಷಕ ಎಸ್ ಟಿ ಮಂಜುನಾಥ ಮಾತನಾಡಿದರು. ಇದೇ ವೇಳೆ ಜೆಎನ್‍ಕೋಟೆ ಕ್ಲಸ್ಟರ್ ವ್ಯಾಪ್ತಿಯ ಹಿಂಬದಿ ಶಾಲೆಗಳ ವಿದ್ಯಾರ್ಥಿಗಳು ಶಿಕ್ಷಕರು ಪಾಲ್ಗೊಂಡಿದ್ದರು. ಇದೇ ವೇಳೆ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಎರಡು ಹಂತದಲ್ಲಿ ಕಂಠಪಾಠಸ್ಪರ್ಧೆ, ಧಾರ್ಮಿಕ ಪಠಣ, ಲಘುಸಂಗೀತಾ, ಛದ್ಮವೇಶ, ಚಿತ್ರಕಲೆ, ಅಭಿನಯಗೀತೆ, ಕ್ಲೇಮಾಡಲಿಂಗ್, ಭಕ್ತಿಗೀತೆ, ಆಶುಭಾಷಣ, ಕವನ ಮಿಮಿಕ್ರಿ, ಸಹಪಠ್ಯ ಚಟುವಟಿಕೆ ಕೈಗೊಂಡು ಭಾಗವಹಿಸಿದ್ದ ಎಲ್ಲರಿಗೂ ಬಹುಮಾನ ವಿತರಿಸಲಾಯಿತು.
ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ವಿಜಯಮ್ಮಎಟಿಎಸ್, ಬಾಗಲುವೀರಣ್ಣ, ಮಾಜಿ ಸದಸ್ಯ ಪಾಪನಾಯಕ, ಶಾಲಾ ಸಮಿತಿಯ ಅಧ್ಯಕ್ಷ ಆರ್ ತಿಪ್ಪೇಸ್ವಾಮಿ, ಸದಸ್ಯರಾದ ಸಣ್ಣಬೋರಯ್ಯ, ಗುರುಸ್ವಾಮಿ, ಸಿಆರ್‍ಪಿಗಳಾದ ಮಲ್ಲಿಕಾ, ಶಿವರುದ್ರಪ್ಪ, ಮುಖ್ಯಶಿಕ್ಷಕರಾದ ರಂಗಸ್ವಾಮಿ, ವೆಂಕಟೇಶ, ನರಸಿಂಹಮೂರ್ತಿ, ಮಹಾಲಿಂಗಪ್ಪ, ರೇಣುಕಮ್ಮ,ಬಿ ಎಚ್ ಮಂಜುಳಾ, ಶಿಕ್ಷಕರಾದ ಒ ಚಿತ್ತಯ್ಯ ಸಿದ್ದಮ್ಮ, ರೇಣುಕಮ್ಮ, ಸೋಮಶೇಖರ, ಮಂಜುನಾಥ, ಮೇಘಾ, ಜೆಎನ್‍ಕೋಟೆ ವ್ಯಾಪ್ತಿಯ ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು ವಿದ್ಯಾರ್ಥಿಗಳು ಗ್ರಾಮಸ್ಥರು ಇದ್ದರು.
ಜೋಡಿಚಿಕ್ಕೇನಹಳ್ಳಿಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಯಲ್ಲಿ ಮಂಗಳವಾರ ಶಾಲಾ ಶಿಕ್ಷಣ ಇಲಾಖೆ, ಸ್ಥಳೀಯ ಆಡಳಿತ ಹಾಗೂ ಜೆಎನ್‍ಕೋಟೆ ಕ್ಲಸ್ಟರ್ ಕೇಂದ್ರದ ವತಿಯಿಂದ ಆಯೋಜಿಸಿದ್ದ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮವನ್ನು ಸಿಆರ್‍ಪಿ ವೆಂಕಟೇಶರೆಡ್ಡಿ ಗ್ರಾಪಂ ಸದಸ್ಯರಾದ ವಿಜಯಮ್ಮಎಟಿಎಸ್, ಬಾಗಲುವೀರಣ್ಣ, ಶಾಲಾ ಸಮಿತಿಯ ಅಧ್ಯಕ್ಷ ಆರ್ ತಿಪ್ಪೇಸ್ವಾಮಿ ಉಧ್ಘಾಟಿಸಿದರು.
ವಿವಿಧ ಶಾಲೆಯ ಮಕ್ಕಳು ಛದ್ಮವೇಶ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಮಾಜಿ ಸದಸ್ಯ ಪಾಪನಾಯಕ, ಶಾಲಾ ಸಮಿತಿಯ ಅಧ್ಯಕ್ಷ ಆರ್ ತಿಪ್ಪೇಸ್ವಾಮಿ, ಸದಸ್ಯರಾದ ಸಣ್ಣಬೋರಯ್ಯ, ಗುರುಸ್ವಾಮಿ, ಸಿಆರ್‍ಪಿಗಳಾದ ಮಲ್ಲಿಕಾ,
ಶಿವರುದ್ರಪ್ಪ, ಮುಖ್ಯಶಿಕ್ಷಕರಾದ ನರಸಿಂಹಮೂರ್ತಿ, ಮಹಾಲಿಂಗಪ್ಪ, ರೇಣುಕಮ್ಮ, ಬಿ ಎಚ್ ಮಂಜುಳಾ, ಶಿಕ್ಷಕರಾದ ಸಿದ್ದಮ್ಮ, ರೇಣುಕಮ್ಮ, ಸೋಮಶೇಖರ, ಮಂಜುನಾಥ, ಮೇಘಾ, ಜೆಎನ್‍ಕೋಟೆ ವ್ಯಾಪ್ತಿಯ ವಿವಿಧ
ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು ವಿದ್ಯಾರ್ಥಿಗಳು ಗ್ರಾಮಸ್ಥರು ಇದ್ದರು.