Monday, May 19, 2025
Homeಮಧ್ಯ ಕರ್ನಾಟಕದಾವಣಗೆರೆರೈಲ್ವೆ ಹಳಿ ಮಧ್ಯೆ ಮಲಗಿ ಪ್ರಾಣ ಉಳಿಸಿಕೊಂಡ ಶಿಕ್ಷಕ

ರೈಲ್ವೆ ಹಳಿ ಮಧ್ಯೆ ಮಲಗಿ ಪ್ರಾಣ ಉಳಿಸಿಕೊಂಡ ಶಿಕ್ಷಕ

ದಾವಣಗೆರೆ: ಇಲ್ಪಿನ ರೈಲ್ವೆ ನಿಲ್ದಾಣದಲ್ಲಿ ಮುಖ್ಯ ಶಿಕ್ಷಕರೊಬ್ಬರು ನಡದುಕೊಂಡು ಹೋಗುತ್ತಿದ್ದಾಗ ಎಡವಿ ಹಳಿಯ ಮಧ್ಯೆ ಮಲಗಿದ್ದು, ತಕ್ಷಣವೇ ಗೂಡ್ಸ್ ರೈಲು ಚಲಿಸಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಬಿ.ದುರ್ಗ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಿವಕುಮಾರ್ ಪ್ರಾಣಾಪಾಯದಿಂದ ಪಾರಾದವರು.

ಬೆಳಿಗ್ಗೆ 8.30ರ ವೇಳೆ ಬೆಂಗಳೂರು ಇಂಟರ್ ಸಿಟಿ ರೈಲಿಗೆ ಹೊರಡಲು ಆತುರದಲ್ಲಿ ಒಂದನೇ ಫ್ಲಾಟ್ ಫಾರಂನಿಂದ 2ನೇ ಫ್ಲಾಟ್ ಫಾರಂಗೆ ಹೋಗಲು ಹಳಿ ದಾಟುವಾಗ ಚಪ್ಪಲಿ ಸಿಲುಕಿಕೊಂಡು ಎಡವಿ ಹಳಿಯ ಮಧ್ಯೆ ಬಿದ್ದಿದ್ದಾರೆ. ತಕ್ಷಣವೇ ಗೂಡ್ಸ್ ರೈಲು ಮಧ್ಯದ ಹಳಿಯ ಮೇಲೆ ಬಂದಿದೆ. ಶಿವಕುಮಾರ್ ಹಳಿಯ ಮಧ್ಯೆಯೇ ಮಲಗಿದ್ದಾರೆ. ತಕ್ಷಣ ರೈಲ್ವೆ ಸಿಬ್ಬಂದಿಯ ಸೂಚನೆಯ ಮೇರೆಗೆ ಗೂಡ್ಸ್ ರೈಲು ನಿಲ್ಲಿಸಿದ್ದು, ಆರ್ ಪಿಎಫ್ ಸಿಬ್ಬಂದಿ ಅವರನ್ನು ಮೇಲೆ ಎತ್ತಿ ರಕ್ಷಿಸಿದ್ದಾರೆ.

ಶಿಕ್ಷಕ ಶಿವಕುಮಾರ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ‌ ಚಿಕಿತ್ಸೆ ನೀಡಲಾಗುತ್ತಿದೆ.