Saturday, December 14, 2024
Homeಕರಾವಳಿ ಕರ್ನಾಟಕಉಡುಪಿಚೈತ್ರಾ ಕುಂದಾಪುರ ವಿರುದ್ಧ ಮತ್ತೊಂದು ವಂಚನೆ ಪ್ರಕರಣ

ಚೈತ್ರಾ ಕುಂದಾಪುರ ವಿರುದ್ಧ ಮತ್ತೊಂದು ವಂಚನೆ ಪ್ರಕರಣ

ಉಡುಪಿ: ಬಟ್ಟೆ ಅಂಗಡಿ ಹಾಕಿಕೊಡುವುದಾಗಿ ನಂಬಿಸಿ 5 ಲಕ್ಷ ಪಡೆದು ವಂಚನೆ ಮಾಡಿದ ಆರೋಪದ ಮೇಲೆ ಚೈತ್ರಾ ಕುಂದಾಪುರ ವಿರುದ್ಧ ಬ್ರಹ್ಮಾವರ ತಾಲ್ಲೂಕಿನ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2015ರಲ್ಲಿ ಪರಿಚಯವಾದ ಚೈತ್ರಾ ಬಿಜೆಪಿಯಲ್ಲಿ ಉನ್ನತ ಸ್ಥಾನದಲ್ಲಿರುವ ಹಲವು ಸಚಿವರು, ಶಾಸಕರು ನಿಕಟ ಸಂಪರ್ಕದಲ್ಲಿದ್ದಾರೆ ಎಂದು ನಂಬಿಸಿದ್ದಾರೆ. ಉಡುಪಿ ಹಾಗೂ ಕೋಟದಲ್ಲಿ ಬಟ್ಟೆ ಅಂಗಡಿಗಳನ್ನು ಹಾಕಲು ನೆರವು ನೀಡುವುದಾಗಿ ಹೇಳಿ 2018ರಿಂದ 2022ರವರೆಗೆ ಹಂತ ಹಂತವಾಗಿ 5 ಲಕ್ಷ ಪಡೆದಿದ್ದಾರೆ.

ನಂತರ ಚೈತ್ರಾ ನಡೆ ಬಗ್ಗೆ ಅನುಮಾನಗೊಂಡು ಬಟ್ಟೆ ಅಂಗಡಿ ಹಾಕಿಕೊಡುವಂತೆ ಪಟ್ಟು ಹಿಡಿದಾಗ ಸುಳ್ಳು ಅತ್ಯಾಚಾರ ಪ್ಕರರಣ ದಾಖಲಿಸುವುದಾಗಿ, ಗೂಂಡಾಗಳಿಂದ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ’ ಎಂದು ಸುದಿನ ಎಂಬುವರು ದೂರು ನೀಡಿದ್ದು ಚೈತ್ರಾ ವಿರುದ್ಧ ಪ್ರಕರಣ ದಾಖಲಾಗಿದೆ.