ಯಶವಂತಪುರ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿಗೆ ಸಂಬಂಧಿಸಿದ ಕೆಲಸಗಳು ಫೆಬ್ರವರಿ 2023ರಿಂದ ಪ್ರಾರಂಭವಾಗಿದೆ. ಹಂತ -1 ರಲ್ಲಿ, ಯಶವಂತಪುರ ನಿಲ್ದಾಣದ ಪೂರ್ವ ಭಾಗದಲ್ಲಿ (ಪ್ಲಾಟ್‌ಫಾರ್ಮ್ 1 ಬದಿಯಲ್ಲಿ) ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಹಾಗೂ ಪ್ರಯಾಣಿಕರ ಪಿಕ್ ಅಪ್/ಡ್ರಾಪ್ ಗೆ ಅನುಕೂಲವಾಗುವ ಎಲಿವೇಟೆಡ್ ರಸ್ತೆಗೆ ಸಂಬಂಧಿಸಿದ ನಿರ್ಮಾಣ ಕಾರ್ಯಗಳು ಭರದಿಂದ ಸಾಗಿವೆ. ನಿಲ್ದಾಣದ ಆಗಮನ – ನಿರ್ಗಮನ ದ್ವಾರಗಳು ಪ್ರತ್ಯೇಕವಾಗಿದ್ದು, ಪ್ರಯಾಣಿಕರ ದಟ್ಟಣೆಯಾಗದೆ ಸರಾಗವಾದ ವಾಹನ ಸಂಚಾರಕ್ಕೂ ಕೂಡ ಅನುಕೂಲವಾಗಲಿದೆ.
ವಾಹನಗಳಿಗೆ ಪ್ರತ್ಯೇಕ ಆಗಮನ ಮತ್ತು ನಿರ್ಗಮನ ವ್ಯವಸ್ಥೆ ಇರಲಿದ್ದು, ಇದರಿಂದ ವಾಹನಗಳ ದಟ್ಟಣೆ ತಡೆಯಬಹುದಾಗಿದೆ. ಈ ನಿಲ್ದಾಣವು ಬೃಹತ್ ಗಾತ್ರದ ಏರ್ ಕಾನ್ಕೋರ್ಸ್ (14,800 ಚದರ ಮೀಟರ್ ಗಾತ್ರ)ನ್ನು ಸಹ ಹೊಂದಿರಲಿದೆ. ಇದರಲ್ಲಿ ಆಹಾರ ಮಳಿಗೆಗಳು, ವಾಣಿಜ್ಯ ಮಳಿಗೆಯ ಸ್ಥಳ, ವ್ಯಾಪಾರ ಕೇಂದ್ರಗಳು ಸೇರಿದಂತೆ ಇನ್ನಿತರ ಸ್ಥಳಗಳನ್ನು ಒದಗಿಸುವುದರೊಂದಿಗೆ ವಿಮಾನ ನಿಲ್ದಾಣಗಳಲ್ಲಿ ಲೌಂಜ್ ಸಮನಾಗಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಮಳೆನೀರು ಕೊಯ್ಲು, ಒಳಚರಂಡಿ ನೀರು ಸಂಸ್ಕರಣಾ ಘಟಕಗಳು ಇತ್ಯಾದಿಗಳೊಂದಿಗೆ ಹಸಿರು ಕಟ್ಟಡ ಮಾನದಂಡಗಳ ಪ್ರಕಾರ ಈ ನಿಲ್ದಾಣವನ್ನು ನಿರ್ಮಿಸಲಾಗುತ್ತಿದೆ. ಇದರ ಜೊತೆಗೆ ಇಂಧನ ದಕ್ಷತೆಯ ಎಲ್ಇಡಿ ದೀಪಗಳ ಲೈಟಿಂಗ್ ಅಳವಡಿಸಲಾಗುವುದು.
ಹಂತ -1 ಪೂರ್ವ ಭಾಗದಲ್ಲಿ ಕಾಮಗಾರಿ ಪೂರ್ಣಗೊಂಡ ನಂತರ, ಪಶ್ಚಿಮ ಭಾಗದ (ಮೆಟ್ರೋ ಕಡೆಗೆ) ಕೆಲಸ ಪ್ರಾರಂಭವಾಗಲಿದೆ. ಯಶವಂತಪುರ ನಿಲ್ದಾಣದ ಪುನರಾಭಿವೃದ್ಧಿ ಕಾಮಗಾರಿಯೂ ಜುಲೈ 2025 ರೊಳಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ. ದೆಹಲಿಯ M/s ಗಿರ್ಧಾರಿ ಲಾಲ್ ಕನ್ಸ್ಟ್ರಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಈ ಕಾಮಗಾರಿಯ ಗುತ್ತಿಗೆಯನ್ನು ಪಡೆದಿದೆ. ಈ ಕಾಮಗಾರಿಯ ಅಂದಾಜು ವೆಚ್ಚ 380 ಕೋಟಿ ರೂಪಾಯಿಗಳಾಗಿರುತ್ತ
ಪುನರಾಭಿವೃದ್ಧಿಪಡಿಸಿದ ನಿಲ್ದಾಣದ 3ಡಿ ಮಾದರಿಯ ಚಿತ್ರವನ್ನು ನಿಲ್ದಾಣದ ಆವರಣದಲ್ಲಿ ಪ್ರದರ್ಶಿಸಲಾಗುತ್ತದೆ. ಪುನರಾಭಿವೃದ್ಧಿಯ ನಂತರ ನಿಲ್ದಾಣವು ಹೇಗಿರಲಿದೆ ಎಂಬುದರ ಒಂದು ನೋಟವನ್ನು ಸೆರೆ-ಹಿಡಿಯಲು ಇಚ್ಚಿಸುವ ಪಾಲುದಾರರು, ವಿದ್ಯಾರ್ಥಿಗಳು, ವಾಸ್ತುಶಿಲ್ಪಿಗಳು ಈ ನಿಲ್ದಾಣಕ್ಕೆ ಭೇಟಿ ನೀಡಿ ಮಾದರಿಯನ್ನು ವೀಕ್ಷಿಸಬಹುದು.
2022ರ ಜೂನ್‌ನಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಈ ನಿಲ್ದಾಣದ ಪುನರಾಭಿವೃದ್ಧಿಗೆ ತಳಪಾಯ ಹಾಕಿದ್ದರು.