Saturday, December 14, 2024
Homeರಾಜ್ಯಕಲ್ಯಾಣ ಕರ್ನಾಟಕಸಿಲಿಂಡರ್ ಸ್ಪೋಟ: ಹೋಟೆಲಿಗೆ ಬೆಂಕಿ

ಸಿಲಿಂಡರ್ ಸ್ಪೋಟ: ಹೋಟೆಲಿಗೆ ಬೆಂಕಿ

ಕೊಪ್ಪಳ: ಇಲ್ಲಿನ ಗಂಜ್ ಸರ್ಕಲ್ ‌ಸಮೀಪದಲ್ಲಿರುವ ಆಟೊ ಮೊಬೈಲ್ ಮತ್ತು ಹೋಟೆಲ್ ಗೆ ಬೆಂಕಿ ತಗುಲಿದ ಪರಿಣಾಮ ಎರಡೂ ಕಡೆಯ ಸಾಮಗ್ರಿಗಳು ಸುಟ್ಟು ಕರಕಲಾಗಿವೆ.

ಶನಿವಾರ ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಹೋಟೆಲ್ ನಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡ ಕಾರಣ ಬೆಂಕಿ ‌ಹೊತ್ತಿಕೊಂಡಿದೆ. ಆಟೊಮೊಬೈಲ್ ಗೆ ‌ಸಂಬಂಧಿಸಿದ ಸಾಮಗ್ರಿಗಳು ಪೂರ್ಣ ಸುಟ್ಟು ‌ಹೋಗಿವೆ. ಹೋಟೆಲ್ ನ ತಗಡಿನ ಶೀಟ್ ಗಳು ‌ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಪೊಲೀಸ್ ಹಾಗೂ ಅಗ್ನಿಶಾಮಕದ ಸಿಬ್ಬಂದಿ ಮಧ್ಯರಾತ್ರಿ ಪೋನ್ ಮಾಡಿ ಬೆಂಕಿ ಹೊತ್ತಿಕೊಂಡಿರುವ ವಿಷಯ ತಿಳಿಸಿದರು. ಬಂದು ನೋಡುತ್ತಿದ್ದಂತೆಯೇ ಅಂಗಡಿಯಲ್ಲಿನ ಬಹುತೇಕ ಸಾಮಗ್ರಿ ಬೆಂಕಿಗೆ‌ ಆಹುತಿಯಾಗಿದ್ದವು ಎಂದು ‌ಆಟೊ‌ ಮೊಬೈಲ್ ಅಂಗಡಿ ಮಾಲೀಕ ಶಫಿ ಸಿದ್ದಕಿ ತಿಳಿಸಿದರು.

ಸಣ್ಣ ಹೋಟೆಲ್ ಇಟ್ಟುಕೊಂಡಿದ್ದ ಯಂಕಪ್ಪ ಹಾಗೂ ಕುಟುಂಬದವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಕಣ್ಣೀರು ಸುರಿಸಿದರು. ಹೋಟೆಲ್ ‌ಒಳಗಿದ್ದ ದ್ವಿಚಕ್ರ ವಾಹನವೂ ಬೆಂಕಿಗೆ ಆಹುತಿಯಾಗಿದೆ.