Monday, May 19, 2025
Homeಸುದ್ದಿರಾಜ್ಯಬಂದ್: ಬಸ್ ಸಂಚಾರ ಸ್ಥಗಿತ, ವಿದ್ಯಾರ್ಥಿಗಳ ಪರದಾಟ

ಬಂದ್: ಬಸ್ ಸಂಚಾರ ಸ್ಥಗಿತ, ವಿದ್ಯಾರ್ಥಿಗಳ ಪರದಾಟ

ಚಿಕ್ಕಮಗಳೂರು: ಕರ್ನಾಟಕ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಉತ್ತಮ‌ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವರ್ತಕರು ಸಂಪೂರ್ಣ ಬೆಂಬಲ‌ ಸೂಚಿಸಿದ್ದಾರೆ.

ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಸೇನೆ, ರೈತ ಸಂಘದ ಕಾರ್ಯಕರ್ತರು ಬಸ್ ಗಳ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿಲ್ಲ. ಕಾಲೇಜುಗಳಿಗೆ ವಿದ್ಯಾರ್ಥಿಗಳು ಬಂದಿದ್ದು, ಪ್ರತಿಭಟನೆ ತೀವ್ರಗೊಂಡ ಬಳಿಕ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳಿಂದ ರಜೆ ನೀಡಲಾಗಿದೆ. ಮನೆಗೆ ವಾಪಸ್ ಹೋಗಲು ಬಸ್ ಗಳು ಇಲ್ಲದೆ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲೇ ಉಳಿದಿದ್ದಾರೆ.

ತುಂತುರು ಮಳೆ ಅರಂಭವಾಗಿದ್ದು, ಮಳೆಯ ನಡುವೆ ಹಮಾಲಿ ಸಂಘಟನೆಗಳು ಮೆರವಣಿಗೆ ನಡೆಸಿದರು.