Saturday, December 14, 2024
Homeಮಧ್ಯ ಕರ್ನಾಟಕದಾವಣಗೆರೆಸಾಹಿತಿಗಳಿಗೆ ಬೆದರಿಕೆ ಪತ್ರ: ಆರೋಪಿ ವಶಕ್ಕೆ

ಸಾಹಿತಿಗಳಿಗೆ ಬೆದರಿಕೆ ಪತ್ರ: ಆರೋಪಿ ವಶಕ್ಕೆ

ದಾವಣಗೆರೆ: ಸಾಹಿತಿಗಳಿಗೆ ಜೀವ ಬೆದರಿಕೆಯೊಡ್ಡಿ ಪತ್ರ ಬರೆಯುತ್ತಿದ್ದ ಪ್ರಕರಣದ ಆರೋಪಿ ಶಿವಾಜಿರಾವ್ ಜಾಧವ್ ಎಂಬುವವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಜ್ಯದ ಹಲವು ಸಾಹಿತಿಗಳಿಗೆ ಬೆದರಿಕೆ ಪತ್ರಗಳು ಬರುತ್ತಿದ್ದವು. ಇದರಿಂದ ಆತಂಕಗೊಂಡಿದ್ದ ಸಾಹಿತಿಗಳು, ಮುಖ್ಯಮಂತ್ರಿ ಅವರಿಗೆ ಮನನಿ ಸಲ್ಲಿಸಿದ್ದರು. ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿತ್ತು.

ಬೆಂಗಳೂರು ಸೇರಿದಂತೆ ಹಲವು ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ಕೈಗೊಂಡಿದ್ದ ಸಿಸಿಬಿ ಎಸಿಪಿ ನೇತೃತ್ವದ ತಂಡ, ಇದೀಗ ಆರೋಪಿ ಶಿವಾಜಿ ರಾವ್ ಅವರನ್ನು ವಶಕ್ಕೆ‌ ಪಡೆದಿದೆ.

‘ದಾವಣಗೆರೆಯಿಂದ ಪತ್ರಗಳು ಬರುತ್ತಿದ್ದ ಬಗ್ಗೆ ಮಾಹಿತಿ‌ ಸಿಕ್ಕಿತ್ತು. ಅಲ್ಲಿಯೇ ಆರೋಪಿಗಳಿಗಾಗಿ ಶೋಧ ನಡೆದಿತ್ತು. ಹಲವರನ್ನು ವಿಚಾರಣೆ ‌ಮಾಡಲಾಗಿತ್ತು. ಅವರ ಪೈಕಿ ಶಿವಾಜಿರಾವ್ ಮೇಲೆ ಹೆಚ್ಚು ಅನುಮಾನ ಬಂದಿತ್ತು. ಈತನೇ ಕೃತ್ಯ ಎಸಗಿರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.