Saturday, December 14, 2024
Homeಮೈಸೂರು ವಿಭಾಗಮೈಸೂರುಮೌಲ್ಯಯುತ ಸಿನಿಮಾಗಳಿಗೆ ಸರ್ಕಾರದ ನೆರವು: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೌಲ್ಯಯುತ ಸಿನಿಮಾಗಳಿಗೆ ಸರ್ಕಾರದ ನೆರವು: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು : ಬದುಕಿಗೆ ಮೌಲ್ಯಗಳನ್ನು ನೀಡುವ ಸಿನಿಮಾಗಳು ಹೆಚ್ಚೆಚ್ಚು ಬರಬೇಕು. ಅವು ಜನರ ಜೀವನದ ಗುಣಮಟ್ಟವನ್ನು ಹೆಚ್ಚಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಮೈಸೂರು ದಸರಾ ಸಿನಿಮೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಗುಣಮಟ್ಟದ ಸಿನಿಮಾಗಳಿಗೆ ಸರ್ಕಾರ ಸದಾ ನೆರವು ನೀಡುತ್ತದೆ. ಜನಪರ ಸಿನಿಮಾ ಮಾಡುವವರಿಗೆ ಸರ್ಕಾರದ ಸಹಾಯಹಸ್ತ ಸದಾ ಇರುತ್ತದೆ ಎಂದರು.

ಹಾಸ್ಯ ನಟ ನರಸಿಂಹರಾಜುಗೆ ನರಸಿಂಹರಾಜುನೇ ಸರಿಸಾಟಿ. ಕನ್ನಡ ಚಿತ್ರರಂಗ ಕಂಡ ಅಪರೂಪದ ಹಾಸ್ಯ ನಟ ನರಸಿಂಹರಾಜು. ಇವರು ಇಲ್ಲದ ಸಿನಿಮ, ಸಿನಿಮಾವೇ ಅಲ್ಲ ಎನ್ನುವಷ್ಟರ ಮಟ್ಟಿಗೆ ಅವರ ಪ್ರತಿಭೆ ಬೆಳ್ಳಿ ತೆರೆಯಲ್ಲಿ ಬೆಳಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.