ಮಹದೇಶ್ವರ ಬೆಟ್ಟ: ತಾಲೂಕಿನ ಗಡಿಭಾಗದ ಪಾಲರ್ ಸಮೀಪದಲ್ಲಿ ಗೂಡ್ಸ್ ವಾಹನ ರಸ್ತೆ ಅಪಘಾತದಲ್ಲಿ 1 ವರ್ಷದ ಮಗು ಮೃತಪಟ್ಮಿದೆ. 5 ಜನರು ಗಾಯಗೊಂಡಿದ್ದಾರೆ.
ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಪಾಲರ್ ಹತ್ತಿರ ಟಿಎನ್.39 ಎಎಫ್.4642 ಗೂಡ್ಸ್ ವಾಹನ ಅಪಘಾತ ನಡೆದಿದ್ದು ವಾಹನ ಚಾಲಕ ಶಿವಣ್ಞ ಪರಾರಿಯಾಗಿದ್ದಾನೆ.
ಪೊನ್ನಾಚಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಂಗಲೆಒಡ್ಡು, ಜಯಂದೊಡ್ಡಿ, ಗೊಟ್ಟದಿಂಬ ಗ್ರಾಮದ ಸೋಲಿಗ ಸಮುದಾಯದ ಜನರು ಅಪಘಾತದಲ್ಲಿ ತೀವ್ರ ಗಾಯಗೊಂಡವರು ಎಂದು ತಿಳಿದು ಬಂದಿದೆ. ಸುಮಾರು 11 ಮಂದಿ ಸೋಲಿಗ ಜನರನ್ನು ಗೂಡ್ಸ್ ವಾಹನದಲ್ಲಿ ಕರೆದುಕೊಂಡು ಪಾಲರ್ ರಸ್ತೆ ಮಾರ್ಗವಾಗಿ ಬರುವಾಗ ಚಾಲಕನ ಅಜಾಗರೂಕತೆ ಚಾಲನೆಯಿಂದ ನಿಯಂತ್ರಣ ತಪ್ಪಿ ರಸ್ತೆ ಅಪಘಾತ ಸಂಭವಿಸಿದೆ.
ಘಟನೆ ಸ್ಥಳಕ್ಕೆ ಮಹದೇಶ್ವರ ಬೆಟ್ಟ ಪೋಲಿಸ್ ಅಧಿಕಾರಿ ನಂತರ ಗಾಯಗೊಂಡ ವ್ಯಕ್ತಿಗಳನ್ನು ತಮಿಳುನಾಡಿನ ಸೇಲಂ ಮತ್ತು ಮೆಟ್ಟೂರು ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಈ ಅಪಘಾತದಿಂದ ಮಾದೇಶ ಎಂಬುವರ 1 ವರ್ಷದ ಮಗು ಸಾವನ್ನಪ್ಪಿದೆ. ಇನ್ನುಳಿದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.