ಮೈಸೂರು: ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯು 2021-22ನೇ ಸಾಲಿನ ಅಕ್ಡೋಬರ್ 25ರಿಂದ ಪ್ರಾರಂಭವಾಗಲಿದೆ.
ಅಕ್ಟೋಬರ್ 29ರವರಗೆ ಇರುತ್ತದೆ. ಗ್ರಾಹಕರು ತಮ್ಮ ಸಮೀಪದ ಅಂಚೆ ಕಚೇರಿಯ ಮೂಲಕ ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ಹೂಡಿಕೆ ಮಾಡಿಕೊಳ್ಳಬಹುದು. ಸಾವರಿನ್ ಗೋಲ್ಡ್ ಬಾಂಡ್ ವೈಶಿಷ್ಟ್ಯಗಳು ಕನಿಷ್ಟ ಹೂಡಿಕೆ ಒಂದು ಗ್ರಾಂ ಆಗಿದ್ದು, ವ್ಯಕ್ತಿಗಳಿಗೆ ಮತ್ತು ಹಿಂದೂ ಅವಿಭಕ್ತ ಕುಟುಂಬಗಳಿಗೆ 4 ಕೆ.ಜಿ ಹಾಗೂ ಟ್ರಸ್ಟ್ ಮತ್ತು ಇದೇ ರೀತಿಯ ಘಟಕಗಳಿಗೆ 20 ಕೆ.ಜಿ(ಒಂದು ಆರ್ಥಿಕ ವರ್ಷದಲ್ಲಿ) ಗರಿಷ್ಟ ಹೂಡಿಕೆಯಾಗಿರುತ್ತದೆ.
ಬಾಂಡ್ ಅವಧಿ 8 ವರ್ಷ ಆಗಿರುತ್ತದೆ