Monday, May 19, 2025
Homeಬೆಂಗಳೂರು ವಿಭಾಗಬೆಂಗಳೂರು ನಗರಅಭಿನವ ಹಾಲಶ್ರೀ ಸ್ವಾಮೀಜಿನ್ನು 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಿಸಿಬಿ ಪೊಲೀಸರು

ಅಭಿನವ ಹಾಲಶ್ರೀ ಸ್ವಾಮೀಜಿನ್ನು 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಿಸಿಬಿ ಪೊಲೀಸರು

ಬೆಂಗಳೂರು: ಬಿಜೆಪಿ ಟಿಕೆಟ್ ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಸಿಸಿಬಿ ಪೊಲೀಸರು ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಬುಧವಾರ ಹಾಜರು ಪಡಿಸಿದರು.

ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಕೊಡಿಸುವ ಆಮಿಷವೊಡ್ಡಿ 1.50ಕೋಟಿ ರೂಪಾಯಿ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಸ್ವಾಮೀಜಿಯನ್ನು ಮಂಗಳವಾರ ಒಡಿಶಾದಲ್ಲಿ ಬಂಧಿಸಲಾಗಿತ್ತು. ಮಂಗಳವಾರ ರಾತ್ರಿಯೇ ವಿಮಾನದಲ್ಲಿ ಅವರನ್ನು ಬೆಂಗಳೂರಿಗೆ ಕರೆತಂದು ಆಡುಗೋಡಿಯ ಟೆಕ್ನಿ‌ಕಲ್ ಸೆಲ್‌ಗೆ ಕಳುಹಿಸಲಾಗಿತ್ತು.

ಸ್ವಾಮೀಜಿ ಅವರು ವೇಷ ಬದಲಾವಣೆ ಮಾಡಿಕೊಂಡು, ಒಡಿಶಾದಲ್ಲಿ ಓಡಾಟ ನಡೆಸುತ್ತಿದ್ದರು. ಮಾಹಿತಿ‌‌ ಮೇರೆಗೆ ಒಡಿಶಾಕ್ಕೆ ತೆರಳಿದ್ದ ಸಿಸಿಬಿ ತಂಡವು ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿತ್ತು.