Saturday, December 14, 2024
Homeರಾಜ್ಯಬೆಂಗಳೂರು ವಿಭಾಗಅತ್ತಿಬೆಲೆ ಪಟಾಕಿ ದುರಂತ ಸಾವಿನ‌ ಸಂಖ್ಯೆ 16 ಕ್ಕೆ ಏರಿಕೆ

ಅತ್ತಿಬೆಲೆ ಪಟಾಕಿ ದುರಂತ ಸಾವಿನ‌ ಸಂಖ್ಯೆ 16 ಕ್ಕೆ ಏರಿಕೆ

ಆನೇಕಲ್: ಅತ್ತಿಬೆಲೆ ಪಟಾಕಿ ದುರಂತದಲ್ಲಿ ತೀವ್ರವಾಗಿ ಗಾಯಗೊಂಡು ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೆಂಕಟೇಶ್ ಎಂಬುವರು ಗುರುವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ.

ಇದರೊಂದಿಗೆ ಅತ್ತಿಬೆಲೆ ಪಟಾಕಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 16 ಕ್ಕೆ ಏರಿದೆ.

ಸ್ನೇಹಿತನೊಂದಿಗೆ ವೆಂಕಟೇಶ್ ಪಟಾಕಿ ಖರೀದಿಗೆ ಹೋಗಿದ್ದ ಸಂದರ್ಭದಲ್ಲಿ ಪಟಾಕಿ ದುರಂತ ಸಂಭವಿಸಿತ್ತು.

ವೆಂಕಟೇಶ್ ಅವರ ಸ್ನೇಹಿತ ಪಾರಾಗಿದ್ದ. ಆದರೆ, ವೆಂಕಟೇಶ್ ಗೋದಾಮಿನ ಒಳಗೆ ಸಿಲುಕಿ ಹಾಕಿಕೊಂಡಿದ್ದರು.

ಬೆನ್ನು,ತಲೆ,ಕೈ ಕಾಲುಗಳುಗಳಿಗೆ ಬೆಂಕಿ ತಗುಲಿ ಸುಟ್ಟ ಗಾಯಗಳಾಗಿದ್ದವು.

ಫೋಟೋಗ್ರಾಫರ್ ಆಗಿ ಕೆಲಸ ಮಾಡ್ತಿದ್ದ ವೆಂಕಟೇಶ್ ಬಾಡಿ ಬಿಲ್ಡರ್ ಆಗಿದ್ದರು.

ಪರಿಚಯದವರ ಕಾರ್ಯಕ್ರಮಕ್ಕೆ ಪಟಾಕಿ ತರಲು ಅತ್ತಿಬೆಲೆಗೆ ಹೋಗಿದ್ದರು.