Saturday, December 14, 2024
Homeಮಧ್ಯ ಕರ್ನಾಟಕಚಿತ್ರದುರ್ಗಬಹಿರಂಗದ ಬೆಳಕಿಗಿಂತ ಅಂತರಂಗದ ಬೆಳಕು ಬಹಳ ಮುಖ್ಯ

ಬಹಿರಂಗದ ಬೆಳಕಿಗಿಂತ ಅಂತರಂಗದ ಬೆಳಕು ಬಹಳ ಮುಖ್ಯ

ಕಡೂರು : ಕನ್ನಡ ಸಾಹಿತ್ಯ ಪರಿಷತ್ತು, ತಾಲ್ಲೂಕು ಘಟಕ- ಕಡೂರು, ಕನ್ನಡ ಸಾಹಿತ್ಯ ಪರಿಷತ್ತು, ಮಹಿಳಾ ಘಟಕ, ಹೋಬಳಿ ಗ್ರಾಮ ಪಂಚಾಯತಿ ಘಟಕಗಳು, ಕಡೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಕೆ ಹೊಸಳ್ಳಿಯ ಗಂಗಾಂಬಿಕಾ ಸಮುದಾಯ ಭವನದಲ್ಲಿ ನಡೆದ ‘ಶ್ರಾವಣ ಸಂಜೆಯಲ್ಲಿ ಮತ್ತೆ ಕಲ್ಯಾಣ’ ಸಮಾರೋಪ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಬಹಿರಂಗದ ಬೆಳಕಿಗಿಂತ ಅಂತರಂಗದ ಬೆಳಕು ಬಹಳ ಮುಖ್ಯ. ನಿಜವಾದ ಬೆಳಕು ಅಂತರಂಗದಿಂದ ಬರುತ್ತೆ.
ಅಂತರಂಗದ ಬೆಳಕು ಇಲ್ಲದಿಲ್ಲದ್ದರೆ ಬಹಿರಂಗದ ಬೆಳಕಿಗೆ ಬೆಲೆಯಿಲ್ಲ. ‘ಮತ್ತೆ ಕಲ್ಯಾಣ’ದ ಮೂಲಕ ಅಂತರಂಗದ ಬೆಳಕನ್ನು ಕಂಡುಕೊಳ್ಳಬೇಕು.

12ನೆಯ ಶತಮಾನದ ಶರಣ ಶರಣೆಯರು ಯಾವುದೇ ಶಾಲಾ ಕಾಲೇಜಿಗೆ ಹೋದವರಲ್ಲ. ಅವರ ವಿಚಾರಗಳನ್ನು ದೊಡ್ಡ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಓದುತ್ತಿದ್ದೇವೆ. ಶರಣರ ನುಡಿಗಳು ಹೃದಯದಿಂದ ಬಂದವುಗಳು. ಅಂತಹ ಹೃದಯದ ಭಾಯಿಂದ ಹುಟ್ಟಿಕೊಂಡಿದ್ದೇ ವಚನ ಸಾಹಿತ್ಯ. ಎಲ್ಲ ಶರಣರು ನುಡಿಯಂತೆ ನಡೆದರು. ನಡೆದಂತೆ ನುಡಿದರು. ‘ಮತ್ತೆ ಕಲ್ಯಾಣ’ ಕಾರ್ಯಕ್ರಮದ ಮೂಲಕ ಅರಿವಿನ ಕೆಲಸವನ್ನು ಮಾಡ್ತಾ ಬಂದಿದ್ದಾರೆ. ಸಾಹಿತ್ಯ, ಸಂಗೀತದ ಒಲವನ್ನು ಕಳೆದುಕೊಂಡರೆ ದೆವ್ವಗಳಾಗುತ್ತೇವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ದೇವಮಾನವರಾಗುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಯಳನಾಡಿನ ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಸ್ವಾಮಿಗಳವರು ಆಶೀರ್ವಚನ ನೀಡಿದರು. ನಾಗಶ್ರೀ ತ್ಯಾಗರಾಜ್ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಅಜ್ಜಂಪುರ ಶ್ರೀನಿವಾಸ, ಸಿಂಗಟಗೆರೆ
ಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.

ಶಿವಕುಮಾರ ಬಿ ಎಸ್, ಸಾಣೇಹಳ್ಳಿ