ದೇಶದಾದ್ಯಂತ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಸಿಐಟಿಯು ಬಂಡವಾಳಶಾಹಿಗಳ ಶೋಷಣೆಗೆ ವಿರುದ್ಧ ಹಲವು ರಾಜಿರಾಜಿರಹಿತ ಹೋರಾಟಗಳನ್ನು ನಡೆಸುವ ಮೂಲಕ ಕಾರ್ಮಿಕ ವರ್ಗಕ್ಕೆ ಅವರ ಶ್ರಮದ ಹಕ್ಕನ್ನು ಪಡೆದುಕೊಳ್ಳುವಲ್ಲಿ ಸಫಲವಾಗಿದೆ. ಸರಕಾರಗಳಿಂದ ಹಲವು ಸವಲತ್ತುಗಳನ್ನು ತೆಗೆಸಿಕೊಡುವಲ್ಲಿ ಮಹತ್ತರ ಪಾತ್ರವಹಿಸಿದೆ ಎಂದು ಕಟ್ಟಡ ಕಾರ್ಮಿಕರ ಸಂಘಟನೆಯ ಮುಖಂಡರಾದ ದಿನೇಶ್ ಶೆಟ್ಟಿ ಇಂದು ( 3-9-2023) ಬಜಾಲ್ ಜಲ್ಲಿಗುಡ್ಡೆಯಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ ಶ್ರಮಶಕ್ತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಮಾತನಾಡುತ್ತಾ ಹಲವು ದಶಕಗಳಿಂದಲೂ ಜಿಲ್ಲೆಯಲ್ಲಿ ನಡೆದ ಕಾರ್ಮಿಕರ ಚಳುವಳಿಗೆ ಬಜಾಲ್ ಗ್ರಾಮದ ಕಾರ್ಮಿಕ ಮುಖಂಡರುಗಳು ನೀಡಿದ ಕೊಡುಗೆ ಅಪಾರ. ಆ ಕೊಡುಗೆ ಭಾಗವಾಗಿ ಈ ಬಜಾಲ್ ಗ್ರಾಮದಲ್ಲಿ ಪಂಚಾಯತ್ ಕಾಲದಿಂದ ಮಾತ್ರವಲ್ಲದೆ ಪಾಲಿಕೆ ಅವಧಿಯಲ್ಲಿಯೂ ಈ ಗ್ರಾಮದ ಜನ ನಮ್ಮ ಸಂಘಟನೆಯನ್ನು ಪ್ರತಿನಿಧಿಸಿದ ಜನಪ್ರತಿನಿಧಿಗಳನ್ನು ಆರಿಸಿ ಕಳುಹಿಸಿದ ಕೀರ್ತಿ ಬಜಾಲ್ ಗ್ರಾಮದ ಜನತೆಗಿದೆ. ಈ ಭಾಗದ ಕಾರ್ಮಿಕರ ಸವಲತ್ತುಗಳನ್ನು ತೆಗೆಸಿಕೊಡಲು ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೇಂದ್ರವಾಗಿ ಈ ಕಚೇರಿ ಕಾರ್ಯಚರಣೆ ನಡೆಸಲಿದೆ ಎಂದರು.
ವೇದಿಕೆಯಲ್ಲಿ ಸಿಐಟಿಯು ರಾಜ್ಯ ಮುಖಂಡರಾದ ಜೆ ಬಾಲಕೃಷ್ಣ ಶೆಟ್ಟಿ, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಡಿವೈಎಫ್ಐ ಮುಖಂಡ ದೀಪಕ್ ಬಜಾಲ್, ಡಿವೈಎಫ್ಐ ನಗರ ಅಧ್ಯಕ್ಷರಾದ ಜಗದೀಶ್ ಬಜಾಲ್, ಬಜಾಲ್ ಕಾರ್ಮಿಕ ಸಂಘಟನೆಯ ಮುಖಂಡರಾದ ಮೋಹನ್ ಜಲ್ಲಿಗುಡ್ಡೆ, ಜಯಪ್ರಕಾಶ್ ಜಲ್ಲಿಗುಡ್ಡೆ, ರೋಹಿಣಿ ಜಲ್ಲಿಗುಡ್ಡೆ, ಗೀತಾ ಜಲ್ಲಿಗುಡ್ಡೆ, ಮಮತಾ ಜಲ್ಲಿಗುಡ್ಡೆ, ಕೇಶವ ಭಂಡಾರಿ, ಅಶೋಕ್ ಸಾಲ್ಯಾನ್ , ಲತೀಫ್ ಜಲ್ಲಿಗುಡ್ಡೆ, ಇಕ್ಬಾಲ್, ಸದಾಶಿವ ನಾಯಕ್, ದೀಕ್ಷಿತಾ ಜಲ್ಲಿಗುಡ್ಡೆ ಮುಂತಾದವರು ಉಪಸ್ಥಿತರಿದ್ದರು.