ಬೆಂಗಳೂರು; ಅಮೇರಿಕಾದನಲ್ಲಿ ಉನ್ನತ ಶಿಕ್ಷಣದ ಅವಕಾಶಗಳ ಬಗ್ಗೆ ತಿಳಿದುಕೊಳ್ಳಲು ಹಾತೊರೆಯುತ್ತಿರುವ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಅಮೇರಿಕಾದ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳೊಂದಿಗೆ ಖುದ್ದು ಭೇಟಿಯಾಗಲು ಈ ಮೇಳದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ. ಎಜುಕೇಷನ್ ಯು.ಎಸ್.ಎ, ಬೆಂಗಳೂರಿನ ಯಶ್ನಾ ಟ್ರಸ್ಟ್ ನಲ್ಲಿ ಚೆನ್ನೈನಲ್ಲಿನ ಅಮೇರಿಕ ದೂತಾವಾಸದ ಸಹಯೋಗದಲ್ಲಿ ಸೆಪ್ಟೆಂಬರ್ 3, 2023ರಂದು ಭಾನುವಾರ ಮಧ್ಯಾಹ್ನ 2.00ರಿಂದ ಸಂಜೆ 5.00ರವರೆಗೆ ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ ತಾಜ್ ಎಂ.ಜಿ. ರೋಡ್ ಹೋಟೆಲ್ ನಲ್ಲಿ ಮೇಳವನ್ನು ಆಯೋಜಿಸಲಾಗಿದೆ.
ಈ ಮೇಳವು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಯುನೈಟೆಡ್ ಸ್ಟೇಟ್ಸ್ ನ 36 ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಪ್ರತಿನಿಧಿಗಳನ್ನು ಭೇಟಿಯಾಗುವ ಅವಕಾಶ ಕಲ್ಪಿಸಲಿದೆ. ಈ ಮೇಳವು ಯುನೈಟೆಡ್ ಸ್ಟೇಟ್ಸ್ ನಲ್ಲಿ ಸ್ನಾತಕ, ಸ್ನಾತಕೋತ್ತರ, ಪಿಎಚ್.ಡಿ ಕೋರ್ಸ್ ಗಳನ್ನು ಕಲಿಯುವ ಆಸಕ್ತರಿಗೆ ಮುಕ್ತವಾಗಿರುತ್ತದೆ. ಪ್ರವೇಶ ಉಚಿತ, ಆದರೆ ನೋಂದಣಿ ಅಗತ್ಯವಾಗಿರುತ್ತದೆ. ಕಾರ್ಯಕ್ರಮ ವಿವರಗಳು ಕಾರ್ಯಕ್ರಮ: 2023 ಎಜುಕೇಷನ್ ಯು.ಎಸ್.ಎ. “ಸ್ಟಡಿ ಇನ್ ದಿ ಯು.ಎಸ್.” ಯೂನಿವರ್ಸಿಟಿ ಫೇರ್ ದಿನಾಂಕ: ಸೆಪ್ಟೆಂಬರ್ 3, 2023ರಂದು ಭಾನುವಾರ ಸಮಯ: ಮಧ್ಯಾಹ್ನ 2.00ರಿಂದ ಸಂಜೆ 5.00 ಸ್ಥಳ: ಹೋಟಲ್ ತಾಜ್ ಎಂ.ಜಿ.ರಸ್ತೆ, ಬೆಂಗಳೂರು ನೋಂದಣಿ: https://bit.ly/EdUSAFair23PR (ಮೇಳದ ದಿನ ಉದ್ದದ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಮೊದಲೇ ನೋಂದಣಿ ಮಾಡಿಕೊಳ್ಳಿ. ಮಾಹಿತಿ ಕಾರ್ಯಕ್ರಮವು ಮಧ್ಯಾಹ್ನ 1.30ಕ್ಕೆ ಪ್ರಾರಂಭವಾಗುತ್ತವೆ ಮತ್ತು ಮೇಳ ನಡೆಯುವ ಹೊತ್ತಿನಲ್ಲೇ ನಡೆಯುತ್ತವೆ) ಈ ಮೇಳದಲ್ಲಿ ಭಾಗವಹಿಸುವ ಅಮೆರಿಕಾದ ಉನ್ನತ ಶಿಕ್ಷಣ ಸಂಸ್ಥೆಗಳು ವೈವಿಧ್ಯಮಯ ಭೌಗೋಳಿಕ ಮತ್ತು ಶೈಕ್ಷಣಿಕ ವಲಯವನ್ನು ಪ್ರತಿನಿಧಿಸುತ್ತಿದ್ದು, ಸ್ನಾತಕ, ಸ್ನಾತಕೋತ್ತರ ಮತ್ತು ಡಾಕ್ಟೊರಲ್ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹೊಂದಿವೆ.
ಈ ಮೇಳದಲ್ಲಿ ಭಾಗವಹಿಸುವವರು ಹಲವು ಯು.ಎಸ್. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಮಾನದಂಡಗಳ ಬಗ್ಗೆಯೂ ಮಾಹಿತಿ ಪಡೆಯುತ್ತಾರೆ. ಯು.ಎಸ್. ಯೂನಿವರ್ಸಿಟಿಗಳೊಂದಿಗೆ ಚರ್ಚೆಗಳು, ಎಜುಕೇಷನ್ ಯು.ಎಸ್.ಎ. ಸಲಹೆಗಾರರು ಮತ್ತು ಯು.ಎಸ್. ರಾಯಭಾರ ಕಚೇರಿಯ ಪ್ರತಿನಿಧಿಗಳು ವಿದ್ಯಾರ್ಥಿಗಳಿಗೆ ಯು.ಎಸ್. ಉನ್ನತ ಶಿಕ್ಷಣದ ಕುರಿತಂತೆ ಮಾಹಿತಿಪೂರ್ಣ ನಿರ್ಧಾರಗಳನ್ನು ಕೈಗೊಳ್ಳಲು ನೆರವಾಗುತ್ತಾರೆ. ಮೇಳದಲ್ಲಿ ಭಾಗವಹಿಸಿದವರು ಯು.ಎಸ್. ವಿದ್ಯಾರ್ಥಿ ವೀಸಾ ಅರ್ಜಿ ಪ್ರಕ್ರಿಯೆ ಮತ್ತು ಯು.ಎಸ್.ನಲ್ಲಿ ಅಧ್ಯಯನ ಮಾಡುವುದು ಮತ್ತು ಜೀವಿಸುವುದರ ಇತರೆ ಆಯಾಮಗಳ ಕುರಿತು ಅರಿವು ಹೊಂದುತ್ತಾರೆ. “ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳ ಭಾರತೀಯ ವಿದ್ಯಾರ್ಥಿಗಳಿಗೆ ನೆರವಾಗುವ ಅವಕಾಶವನ್ನು ಸ್ವಾಗತಿಸುತ್ತೇವೆ.
ನೀವು ಅಮೆರಿಕನ್ ಸೆಂಟರ್ ನಲ್ಲಿ ನಿಮ್ಮ ಆಯ್ಕೆಗಳ ಕುರಿತು ಸಂಶೋಧನೆ ನಡೆಸುತ್ತಿರಿ, ಎಜುಕೇಷನ್ ಯು.ಎಸ್.ಎ.ಯೊಂದಿಗೆ ಅರ್ಜಿ ಪ್ರಕ್ರಿಯೆಯನ್ನು ಅರಿಯುತ್ತಿರಿ ಅಥವಾ ನೀವು ಯು.ಎಸ್. ಕ್ಯಾಂಪಸ್ ನಲ್ಲಿ ಕಾಣಲಿರುವ ವಿಶ್ವಮಟ್ಟದ ಬೋಧನೆ ಮತ್ತು ಸೌಲಭ್ಯಗಳನ್ನು ಆನಂದಿಸುತ್ತಿರಿ, ಯುನೈಟೆಡ್ ಸ್ಟೇಟ್ಸ್ ನಿಮಗೆ ನಿಮ್ಮ ಯಶಸ್ಸಿನ ದಾರಿಯಲ್ಲಿ ನೆರವಾಗುವ ಗೌರವ ನಮ್ಮದು” ಎಂದು ರಾಯಭಾರಿ ಎರಿಕ್ ಗಾರ್ಸೆಟ್ಟಿ ಹೇಳಿದರು. 2023 EducationUSA ‘Study in the U.S.’ University FairFormstack Form – 2023 EducationUSA ‘Study in the U.S.’ University Fair ಈ ಮೇಳವು ಆಗಸ್ಟ್ 26, 2023ರಿಂದ ಸೆಪ್ಟೆಂಬರ್ 3, 2023ರವರೆಗೆ ಭಾರತದ ಹೈದರಾಬಾದ್, ಮುಂಬೈ, ಪುಣೆ, ನವದೆಹಲಿ, ಅಹಮದಾಬಾದ್, ಕೊಲ್ಕತಾ, ಚೆನ್ನೈ ಮತ್ತು ಬೆಂಗಳೂರು ಒಳಗೊಂಡು ಎಂಟು ನಗರಗಳಲ್ಲಿ ನಡೆಯಲಿದೆ. ಭಾರತದಲ್ಲಿ ಎಜುಕೇಷನ್ ಯು.ಎಸ್.ಎ. ಕುರಿತು ಎಜುಕೇಷನ್ ಯು.ಎಸ್.ಎ.ಯು ಯು.ಎಸ್. ಉನ್ನತ ಶಿಕ್ಷಣ ಕುರಿತು ಅಧಿಕೃತ ಮಾಹಿತಿ ಮೂಲವಾಗಿದೆ ಮತ್ತು ವಿಶ್ವದಾದ್ಯಂತ ಯು.ಎಸ್.ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ ನ 430 ಅಂತಾರಾಷ್ಟ್ರೀಯ ವಿದ್ಯಾರ್ಥಿ ಸಲಹಾ ಕೇಂದ್ರಗಳ ಸದಸ್ಯ ಸಂಸ್ಥೆಯಾಗಿದೆ.
ಎಜುಕೇಷನ್ ಯು.ಎಸ್.ಎ ಕೇಂದ್ರಗಳು ಸಂಭವನೀಯ ವಿದ್ಯಾರ್ಥಿಗಳನ್ನು ಶಿಕ್ಷಣ ಮೇಳಗಳು ಮತ್ತು ಶಾಲೆಗಳು, ಯೂನಿವರ್ಸಿಟಿಗಳು ಮತ್ತು ಇತರೆ ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ವ್ಯಕ್ತಿಗತ ಮತ್ತು ಆನ್ಲೈನ್ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಯುನೈಟೆಡ್ ಸ್ಟೇಟ್ಸ್ ನಲ್ಲಿ ಅಧ್ಯಯನ ಮಾಡಲು ಮೂಲಕ ನಿಖರ, ಸಮಗ್ರ ಮತ್ತು ಪ್ರಸ್ತುತದ ಮಾಹಿತಿಯನ್ನು ನೀಡುತ್ತದೆ. ಅಹಮದಾಬಾದ್, ಬೆಂಗಳೂರು, ಚೆನ್ನೈ, ಹೈದರಾಬಾದ್(2), ಕೊಲ್ಕತಾ, ಮುಂಬೈ ಮತ್ತು ನವದೆಹಲಿಯ ಎಂಟು ಎಜುಕೇಷನ್ ಯು.ಎಸ್.ಎ. ಕೇಂದ್ರಗಳನ್ನು ಭಾರತದಲ್ಲಿ ಯುನೈಟೆಡ್ ಸ್ಟೇಟ್ಸ್-ಇಂಡಿಯಾ ಎಜುಕೇಷನಲ್ ಫೌಂಡೇಷನ್(ಯು.ಎಸ್.ಐ.ಇ.ಎಫ್); ಅಹಮದಾಬಾದ್ ನ ಇಂಡೊ-ಅಮೆರಿಕನ್ ಎಜುಕೇಷನ್ ಸೊಸೈಟಿ; ಮತ್ತು ಹೈದರಾಬಾದ್ ನ ವೈ-ಆಕ್ಸಿಸ್ ಫೌಂಡೇಷನ್(ವೈ.ಎ.ಎಫ್) ಆಯೋಜಿಸಿದೆ. ಹೆಚ್ಚಿನ ಮಾಹಿತಿಗೆ: https://www.facebook.com/EducationUSAIndia%E0%B2%85%E0%B2%A5%E0%B2%B5%E0%B2%BE ಸಂಪರ್ಕಿಸಿ: edusa@yashnatrust.org ಅಥವಾ +91-9880041115 ಈ ಸಂಖ್ಯೆಗೆ ದೂರವಾಣಿ ವಾಟ್ಸಾಪ್ ಮಾಡಿ.