ಬೆಂಗಳೂರು: ಬಾಕಿ ಉಳಿದಿರುವ 80 ಕೋಟಿ ರೂ. ಭಿಕ್ಷುಕರ ಸೆಸ್ ಹಣವನ್ನು ಕೇಂದ್ರ ಪರಿಹಾರ ಸಮಿತಿಗೆ ಜಮೆ ಮಾಡುವ ಬಗ್ಗೆೆ ಒಂದು ವಾರದಲ್ಲಿ ಪ್ರಮಾಣಪತ್ರ ಸಲ್ಲಿಸಲು ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ನಗರದ ರಸ್ತೆೆಗಳಲ್ಲಿ ಮಕ್ಕಳನ್ನು ಆಟಿಕೆ ಸಾಮಾನು ಮಾರಾಟ ಮಾಡಲು ಹಾಗೂ ಭಿಕ್ಷಾಾಟನೆಗೆ ಬಳಸಿಕೊಳ್ಳುತ್ತಿಿರುವ ವಿಚಾರವಾಗಿ ಲೆಟ್‌ಜ್‌ಕಿಟ್ ಫೌಂಡೇಷನ್ 2020ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಿ ಅರ್ಜಿಯು ಮುಖ್ಯ ನ್ಯಾಾಯಮೂರ್ತಿ ಪ್ರಸನ್ನ ಬಿ. ವರಾಳೆ ಹಾಗೂ ನ್ಯಾಾ. ಕೃಷ್ಣ ಎಸ್. ದೀಕ್ಷಿಿತ್ ಅವರಿದ್ದ ವಿಭಾಗೀಯ ನ್ಯಾಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.
ಈ ವೇಳೆ ಬಿಬಿಎಂಪಿ ಪರ ವಕೀಲ ಎನ್.ಕೆ. ರಮೇಶ್ ವಾದ ಮಂಡಿಸಿ, 2008-09ರಿಂದ 2023-24ರ ಇಲ್ಲಿತನಕ ಸಂಗ್ರಹ ಮಾಡಲಾದ ಭಿಕ್ಷುಕರ ಸೆಸ್‌ನ ಒಟ್ಟು ಮೊತ್ತದಲ್ಲಿ 470 ಕೋಟಿ ರೂ.ಗಳನ್ನು ಕೇಂದ್ರ ಪರಿಹಾರ ಸಮಿತಿಗೆ ಪಾವತಿಸಲಾಗಿದೆ. 80 ಕೋಟಿ ರೂ. ಬಾಕಿ ಇದ್ದು, ಅದನ್ನು ಪಾವತಿಸಲು ಮೂರು ವಾರಗಳ ಕಾಲವಕಾಶಬೇಕು ಎಂದು ಕೋರಿದರು.
ಇದಕ್ಕೆೆ ಪ್ರತಿಕ್ರಿಿಯಿಸಿದ ನ್ಯಾಾಯಪೀಠ, ದೊಡ್ಡ ಮೊತ್ತವನ್ನು ಪಾವತಿ ಮಾಡಿದ್ದು, ಕೇವಲ 80 ಕೋಟಿ ರೂ.ಗಳಷ್ಟೇ ಬಾಕಿ ಉಳಿದಿದೆ. ಇಷ್ಟು ಸಣ್ಣ ಮೊತ್ತವನ್ನು ಪಾವತಿಸಲು ಮೂರು ವಾರ ಏಕೆ? ತಲಾ 40 ರಂತೆ ಎರಡು ವಾರಗಳಲ್ಲಿ 80 ಕೋಟಿ ರೂ.ಗಳನ್ನು ಕೇಂದ್ರ ಪರಿಹಾರ ಸಮಿತಿಗೆ ಪಾವತಿಸಬಹುದಲ್ಲವೇ ಎಂದು ಹೇಳಿತು.
ಅದಕ್ಕೆೆ ಬಿಬಿಎಂಪಿ ಪರ ವಕೀಲರು, ಪಾಲಿಕೆಯ ಆರ್ಥಿಕ ಸ್ಥಿಿತಿಯ ನೋಡಿ ಮುಂದಡಿ ಇಡಬೇಕಾಗುತ್ತದೆ ಎಂದರು. ಆಗ, ಎಷ್ಟು ದಿನ ಅಂತ ಹೀಗೆ ಬಿಡಲು ಆಗುತ್ತದೆ. ಅಷ್ಟಕ್ಕೂ ಸಂಗ್ರಹವಾದ ಭಿಕ್ಷುಕರ ಸೆಸ್ ಹಣವನ್ನು ನೀವೆನು ಪಾಲಿಕೆ ಕಚೇರಿಯಲ್ಲಿ ಇಟ್ಟುಕೊಂಡಿರಲಿಲ್ಲ ಅಲ್ವಾಾ? ಬ್ಯಾಾಕ್‌ನಲ್ಲಿ ಠೇವಣಿ ಇಟ್ಟಿಿರುತ್ತೀರಿ. ಆ ಮೂಲಕ ಹಣವನ್ನು ಪಾಲಿಕೆ ‘ದುಡಿಸಿಕೊಂಡಿದೆ’ ಮತ್ತು ಆ ಹಣದಿಂದ ‘ಲಾಭ’ ಸಹ ಪಡೆದುಕೊಂಡಿರುತ್ತೀರಿ.
ಹೀಗಿದ್ದಾಾಗ ತಕ್ಷಣ ಪಾವತಿಸಲು ಸಮಸ್ಯೆೆಯೇನು ಎಂದು ಪ್ರಶ್ನಿಿಸಿದ ನ್ಯಾಾಯಪೀಠ, ಬಾಕಿ 80 ಕೋಟಿ ರೂ.ಗಳನ್ನು ಕೇಂದ್ರ ಪರಿಹಾರ ಸಮಿತಿಗೆ ಜಮೆ ಮಾಡುವ ಬಗ್ಗೆೆ ಒಂದು ವಾರದಲ್ಲಿ ಪ್ರಮಾಣಪತ್ರ ಸಲ್ಲಿಸಿ, ಅದನ್ನು ಆಧರಿಸಿ ಮುಂದಿನ ನಿರ್ದೇಶನ ನೀಡಲಾಗುವುದು ಎಂದು ಬಿಬಿಎಂಪಿ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.
ಇದೇ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೋೋಕೇಟ್ ಜನರಲ್ ಪ್ರತಿಮಾ ಹೊನ್ನಾಾಪುರ, ರಾಜ್ಯದ ಉಳಿದ ಪಂಚಾಯಿತಿಗಳು ಮತ್ತು ಸ್ಥಳೀಯ ಸಂಸ್ಥೆೆಗಳಿಂದ ಬಾಕಿ ಬರಬೇಕಿದ್ದ 50 ಕೋಟಿ ರೂ. ಭಿಕ್ಷುಕರ ಸೆಸ್ ಪೈಕಿ 20 ಕೋಟಿ ರೂ. ವಸೂಲಿ ಮಾಡಲಾಗಿದೆ. ಉಳಿದ ಮೊತ್ತವನ್ನು ವಸೂಲಿ ಮಾಡುವ ಪ್ರಕ್ರಿಿಯೆ ನಡೆದಿದೆ ಎಂದು ಹೇಳಿದರು. ಅದಕ್ಕೂ ಪ್ರಮಾಣಪತ್ರ ಸಲ್ಲಿಸುವಂತೆ ಹೆಚ್ಚುವರಿ ಅಡ್ವೋೋಕೇಟ್ ಜನರಲ್ ಅವರಿಗೆ ನ್ಯಾಾಯಪೀಠ ಸೂಚಿಸಿತು.
ಅರ್ಜಿದಾರರ ಪರ ವಕೀಲರ ಪುತ್ತಿಿಗೆ ರಮೇಶ್, ಭಿಕ್ಷುಕರ ಸೆಸ್‌ಗೆ ಸಂಬಂಧಿಸಿದಂತೆ ಪಾಲಿಕೆ ಹಿಂದಿನ ವಿಚಾರಣೆ ನೀಡಿದ್ದ ಅಂಕಿ-ಅಂಶಗಳಿಗೂ ಈಗ ಕೊಟ್ಟಿಿರುವ ಮಾಹಿತಿಗೂ ವ್ಯತ್ಯಾಾಸವಿದೆ ಎಂದರು. ಅದಕ್ಕೆೆ ನಿಮ್ಮ ಬಳಿ ಇರುವ ಸರಿಯಾದ ಮಾಹಿತಿಯೊಂದಿಗೆ ಒಂದು ವಾರದಲ್ಲಿ ಪ್ರಮಾಣಪತ್ರ ಸಲ್ಲಿಸಿ, ಇದೇ ಅವಧಿಯಲ್ಲಿ ಬಿಬಿಎಂಪಿ ಅದಕ್ಕೆೆ ಆಕ್ಷೇಪಣೆ ಸಲ್ಲಿಸಲಿ ಎಂದು ನ್ಯಾಾಯಪೀಠ ಸೂಚನೆ ನೀಡಿತು.