ಬೆಂಗಳೂರು: ಸಿನಿಮಾ ರಂಗದ ಸೂಪರ್ ಸ್ಟಾರ್, ತಮಿಳು ಚಿತ್ರರಂಗದ ತಲೈವಾ ರಜನಿಕಾಂತ್ ಮಂಗಳವಾರ ಬೆಂಗಳೂರು ಮಹಾನಗರ ಟ್ರಾನ್ಸಗ ಪೋರ್ಟ್ ಕಾರ್ಪೊರೇಷನ್ ಗೆ (ಬಿಎಂಟಿಸಿ) ದಿಢೀರ್ ಭೇಟಿ ನೀಡಿದರು.
ರಜನಿಕಾಂತ್ ಆಗಿ ಪ್ರಸಿದ್ಧರಾಗುವ ಮೊದಲು ಶಿವಾಜಿ ರಾವ್ ಗಾಯಕ್ವಾಡ್ ಎಂಬುದು ಅವರ ಹೆಸರಾಗಿತ್ತು. ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಆ ನೆನಪಿನಲ್ಲಿ ಬಂದು ಬಸ್ ಚಾಲಕರು ಮತ್ತು ನಿರ್ವಾಕರೊಂದಿಗೆ ಸ್ವಲ್ಪ ಹೊತ್ತು ಕಾಲ ಕಳೆದರು. ರಜನೀಕಾಂತ್ ಅವರ ಕೈಕುಲುಕಿ ಅನೇಕರು ಸಂಭ್ರಮಪಟ್ಟರು. ಕೆಲವರು ಕಾಲುಮುಟ್ಟಿ ಆಶೀರ್ವಾದ ಪಡೆದರು.