Saturday, December 14, 2024
Homeವೈವಿಧ್ಯತಂತ್ರಜ್ಞಾನಚಂದ್ರನ ಮೇಲೆ ಇಳಿದ ವಿಕ್ರಮ

ಚಂದ್ರನ ಮೇಲೆ ಇಳಿದ ವಿಕ್ರಮ

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಸಾಫ್ಟ್‌ ಲ್ಯಾಂಡಿಂಗ್‌ ಆಗಲಿದೆ. ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್‌ ಗಳನ್ನು ಹೊಂದಿರುವ ಲ್ಯಾಂಡರ್ ಮಾಡ್ಯೂಲ್ ಇಂದು ಸಂಜೆ 6.03 ನಿಮಿಷಕ್ಕೆ ಚಂದ್ರನ ನೆಲವನ್ನು ಸ್ಪರ್ಶಿಸಿದೆ ಲ್ಯಾಂಡರ್ ಮಾಡ್ಯೂಲ್ ನಲ್ಲಿ ಲ್ಯಾಂಡರ್ ಮತ್ತು ರೋವರ್ ಗಳಿದ್ದು ಚಂದ್ರನ ಮೇಲೆ ಲ್ಯಾಂಡರ್ ಮಾಡ್ಯೂಲ್ ಇಳಿದಂತೆ ರೋವರ್ ಹೊರಗೆ ಬರುತ್ತದೆ ರೋವರ್ ಚಂದ್ರನ ಮೇಲೆ ಇಳಿಯುವ ನೌಕೆ. ಇದನ್ನು ಚಂದ್ರನ ನೆಲವನ್ನು ಅಧ್ಯಯನ ಮಾಡುವಂತೆ ನಿರ್ಮಾಣ ಮಾಡಲಾಗಿದೆ. ರೋವರ್ ಪ್ರಗ್ಯಾನ್ ಸೇರಿಂತೆ ವಿಕ್ರಮ್ ಲ್ಯಾಂಡರ್ 1749.86 ಕೆಜಿ ತೂಕವಿದೆ. ಚಂದ್ರನ ಮೇಲೆ ಒಂದು ದಿನ ಇದು ಕಾರ್ಯ ನಿರ್ವಹಿಸಲಿದೆ. ಚಂದ್ರನ ಮೇಲಿರುವ ಪ್ಲಾಸ್ಮಾ ,ಅಯಾನುಗಳು ಮತ್ತು ಎಲೆಕ್ಟ್ರಾನ್‌ಗಳ ಸಾಂದ್ರತೆಯನ್ನು, ಲ್ಯಾಂಡಿಂಗ್ ಸೈಟ್ ನ ಕಂಪನವನ್ನು, ಮಣ್ಣಿನಲ್ಲಿರು ರಾಸಾನಿಕಗಳನ್ನು ಕಂಡುಹಿಡಿಯಲು ವಿನ್ಯಾಸಗೊಳಿಸಲಾಗಿದೆ. ಎಎನ್ ಆಲ್ಫಾ ಪಾರ್ಟಿಕಲ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (APXS) ಲ್ಯಾಂಡಿಂಗ್ ಸೈಟ್ ಸುತ್ತ ಇರುವ ಮಣ್ಣು ಮತ್ತು ಬಂಡೆಗಳ ಮೇಲಿರುವ ಮೆಗ್ನೀಸಿಯಮ್, ಅಲ್ಯೂಮಿನಿಯಂ, ಸಿಲಿಕಾನ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಟೈಟಾನಿಯಂ ಮತ್ತು ಕಬ್ಬಿಣದಂತಹ ಸಂಯೋಜನೆಯನ್ನು ಅನಾಲೈಸ್‌ ಮಾಡಲಿದೆ. ಈ ಚಂದ್ರಯಾನ ಇಡೀ ಜಗತ್ತಿನಲ್ಲಿ ಮೊದಲ ಬಾರಿಗೆ ಚಂದ್ರನ ದಕ್ಷಿಣ ದ್ರುವದ ಮೇಲೆ ನೌಕೆಯನ್ನು ಇಳಿಸಲಿದೆ. ಇದು ಭಾರತೀಯರಿಗೆ ಒಂದು ಹೆಮ್ಮೆಯ ಸಂಗತಿ. ಚೀನಾದ ನಂತರ ಭಾರತವೇ ಚಂದ್ರನ ಮೇಲೆ ಆಪರೇಟಿಂಗ್ ರೋವರ್ ಹೊಂದಿರುವ ದೇಶವಾಗಿದೆ. ಭಾರತ ಚೀನಾ, ಯುಎಸ್ ಮತ್ತು ಸೋವಿಯತ್ ಒಕ್ಕೂಟಗಳ ಜೊತೆಗೆ ಚಂದ್ರನ ಮೇಲ್ಮೈ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿದ ನಾಲ್ಕನೇ ದೇಶವಾಗಿದೆ. ಮೋದಿ ಮೆಚ್ಚುಗೆ: ಇಸ್ರೊ ವಿಜ್ಞಾನಿಗಳ ಈ ಸಾಧನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.