Saturday, December 14, 2024
Homeಸುದ್ದಿರಾಜ್ಯಗಣೇಶೋತ್ಸವ: ಇತಿಹಾಸದ ಪುಟಗಳಲ್ಲೇನಿದೆ?

ಗಣೇಶೋತ್ಸವ: ಇತಿಹಾಸದ ಪುಟಗಳಲ್ಲೇನಿದೆ?

ಜನಪ್ರಿಯ ಇತಿಹಾಸದ ನಿರೂಪಣೆಯಲ್ಲಿ “ಸಾರ್ವಜನಿಕ” ಗಣೇಶ ಉತ್ಸವದ ಆಚರಣೆಯು ಬಾಲಗಂಗಾಧರ ತಿಲಕರು ಬ್ರಿಟೀಷರ ವಿರುದ್ಧ ಜನರನ್ನು ಒಗ್ಗೂಡಿಸಲು ಮಾಡಿದ ತಂತ್ರ ಎಂದೇ ಬಣ್ಣಿಸಲಾಗಿದೆ. ಆದರೆ ತಿಲಕರಿಗಿದ್ದ ಸಾಮಾಜಿಕ / ರಾಜಕೀಯ ಒತ್ತಡವನ್ನು ಕೆದಕಿದರೆ ಈ ವಿಷಯ ಅಷ್ಟು ಸರಳವಲ್ಲ ಎಂದು ನಮಗೆ ಅರಿಯುತ್ತದೆ . ಹದಿನೆಂಟನೇ ಶತಮಾನದ ಕೊನೆಯ ಹೊತ್ತಿಗೆ ಮಹಾರಾಷ್ಟ್ರದಲ್ಲಿ ಮೊಹರಂ ಸಾರ್ವಜನಿಕವಾಗಿ ಎಲ್ಲಾ ಧರ್ಮೀಯರಿಂದ ಆಚರಣೆಯಾಗುತಿದ್ದ ದೊಡ್ಡ ಹಬ್ಬ . ಈಗಿನ ಗಣೇಶೋತ್ಸವದಂತೆ ಕೊನೆಯಲ್ಲಿ ನಡೆಯುವಂತೆ ದೊಡ್ಡ ಮೆರವಣಿಗೆಯೂ ಇರುತಿತ್ತು . ಇನ್ನೊಂದು ಮಗ್ಗುಲಲ್ಲಿ ಮಹಾತ್ಮ ಜ್ಯೋತಿಬಾ ಫುಲೆ 1873 ರಲ್ಲಿ ‘ಸತ್ಯಶೋಧಕ ಸಮಾಜ’ವನ್ನು ಸ್ಥಾಪಿಸಿದರು ಮತ್ತು ಹಲವಾರು ಪುಸ್ತಕಗಳನ್ನು ಬರೆದರು( ಗುಲಾಮಗಿರಿ ಮುಖ್ಯವಾಗಿ). ಪ್ರಬಲ ಜಾತಿಗಳು (Bhat, Brahmin, Kalam, Kasai) ಒಡ್ಡಿದ ನಿರೂಪಣೆಗಳನ್ನು ಎದುರಿಸಲು ಅವರು ಬಹುಜನರನ್ನು (ಇಂದಿನ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳು) ಒಟ್ಟುಗೂಡಿಸಲು ಶ್ರಮಿಸಿದರು. ಆಧುನಿಕ ಶಿಕ್ಷಣವೊಂದೇ ಅದಕ್ಕಿರುವ ಮಾರ್ಗ ಎಂದು ಮನಗಂಡು ಈ ನಿಟ್ಟಿನಲ್ಲಿ ಶೋಷಿತ ಸಮಾಜವನ್ನು ಮುನ್ನಡೆಸಿದರು. ಪರ್ಯಾಯ ಪುರಾಣಗಳನ್ನೂ ಶೋಧಿಸಿದರು. ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ ಸತ್ಯಶೋಧಕ ಸಮಾಜದ ಜನಪ್ರಿಯತೆ ಉತ್ತುಂಗದಲ್ಲಿತ್ತು. ಈ ಎರಡು ಘಟನೆಗಳೂ ಸಂಪ್ರದಾಯವಾದಿ ಹಿಂದೂಗಳಿಗೆ ಗಣೇಶೋತ್ಸವದಂತ ( ಅಲ್ಲಿಯವರೆಗೆ ಚತುರ್ತಿಯಂದು ಗಣೇಶನ ಪೂಜೆ ಜನರ ಮನೆಗಳಲ್ಲಿ ಅಷ್ಟೇ ಆಗುತಿತ್ತು ) ಒಂದನ್ನು ಮುನ್ನೆಲೆಗೆ ತರಲು ಇದ್ದ ಸಾಮಾಜಿಕ ಒತ್ತಡ. 1894 ರಲ್ಲಿ ತಿಲಕರು ಮೊದಲಬಾರಿಗೆ ಸಾರ್ವಜನಿಕವಾಗಿ ಗಣೇಶಯೋತ್ಸವ ಆಚರಣೆಗೆ ಶುರುಮಾಡಿದ್ದು. ಮೊಹರಂ ಆಚರಣೆಯೊಂದರಲ್ಲಿ ಉಂಟಾದ ಕೋಮು ಗಲಭೆಯೊಂದರಲ್ಲಿ ಹಿಂದೂಗಳಿಗೆ ಅನ್ಯಾಯವಾಗಿದೆ ಎಂದು ಕಾರಣ ನೀಡಿ. ಸರಿಪಡಿಸಿಕೊಂಡು ಹೋಗೋಣ ಎಂದ ಬ್ರಿಟೀಷ್ ಅಧಿಕಾರಿ ಲಾರ್ಡ್ ಹ್ಯಾರಿಸ್ ಸಲಹೆಯನ್ನು ಅವಗಣಿಸಿ ಪರ್ಯಾಯವಾಗಿ ಗಣೇಶೋತ್ಸವವನ್ನು ಸಾರ್ವಜನಿಕವಾಗಿ ಆಚರಣೆಗೆ ತಂದಿದ್ದು. ಜಾತಿಯಲ್ಲಿ ಚಿತ್ತಪಾವನ ಬ್ರಾಹ್ಮಣರಾದ ತಿಲಕರು ಫುಲೆ (ಮಾಲಿ obc) ಯನ್ನು ನೇರವಾಗಿ ಎದುರಾಗಲಿಲ್ಲವಾದರೂ ಅವರ ನಡೆಗಳು ಸತ್ಯಶೋಧಕ ಸಮಾಜ ತಂದಿದ್ದ ಸಾಮಾಜಿಕ ಪರಿವರ್ತನೆಗಳನ್ನು ಹಿನ್ನಲೆಗೆ ಸರಿಸಲು ಯಶಸ್ವಿಯಾದವು.