Saturday, December 14, 2024
Homeಬೆಂಗಳೂರು ವಿಭಾಗಬೆಂಗಳೂರು ನಗರಹಳಿಗಳ ನಡುವೆ ಮಲಗಿ ಪಾರಾದ ಮಹಿಳೆ

ಹಳಿಗಳ ನಡುವೆ ಮಲಗಿ ಪಾರಾದ ಮಹಿಳೆ

ಬೆಂಗಳೂರು: ಚಲಿಸುತ್ತಿದ್ದ ರೈಲಿನ ಅಡಿಯಲ್ಲಿ ಅಂಗಾತ ಮಲಗಿ ಮಹಿಳೆಯೊಬ್ಬರು ಜೀವ ಉಳಿಸಿಕೊಂಡಿರುವ ಘಟನೆ ರಾಜಾನುಕುಂಟೆ ಬಳಿ ನಡೆದಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ರಾಜನುಕುಂಟೆ ಲೆವೆಲ್ ಕ್ರಾಸಿಂಗ್ ರೈಲು ನಿಂತಿದ್ದರಿಂದ, ಸಥಳಯ ನಿವಾಸಿಗಳು ರೈಲಿನ ಅಡಿಯಲ್ಲೇ ನುಗ್ಗಿ ಆ ಬದಿಗೆ ತೆರಳುತ್ತಿದ್ದರು. ಈ ವೇಳೆ ರೈಲು ಏಕಾಏಕಿ ಚಲಿಸಲಾರಂಭಿಸಿದೆ. ವಿಚಲಿತರಾಗದ ಮಹಿಳೆ, ರೈಲಿನ ಅಡಿಯಲ್ಲಿ ಅಂಗಾತ ಮಲಗಿದ್ದಾರೆ. ರೈಲು ಸಾಗಿ ಹೋದ ನಂತರ ಎದ್ದು ಬಂದಿದ್ದಾರೆ. ರಾಜಾನುಕುಂಟೆಯಲ್ಲಿ ನಾಗರಿಕರು ನಿತ್ಯ ಅನುಭವಿಸುತ್ತಿರುವ ಈ ಸಮಸ್ಯೆಗೆ ಮುಕ್ತಿ ಯಾವಾಗ ಎಂದು ಸ್ಥಳಿಯರು ಪ್ರಶ್ನೆ ಮಾಡಿದ್ದಾರೆ.