ಬೆಂಗಳೂರು: ಹೋರಾಟಗಾರ ಜಿಗಣಿ ಶಂಕರ್(63) ಅವರು ಗುರುವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಜಿಗಣಿ ಶಂಕರ್ ಅವರು ಕರ್ನಾಟಕ ರಿಪಬ್ಲಿಕ್ ಸೇನೆಯ ರಾಜ್ಯ ಘಟಕದ ಅಧ್ಯಕ್ಷರಾಗಿ ಸಂಘಟನೆಗೆ ಶ್ರಮಿಸುತ್ತಿದ್ದರು. ಪಕ್ಷದ ಸಂಘಟನೆಗಾಗಿ ಬಂಗಾರಪೇಟೆ ಸಮೀಪದ ಕಾಮಸಮುದ್ರದಲ್ಲಿ ಕಾರ್ಯಕ್ರಮ ಮುಗಿಸಿ, ರಾತ್ರಿ ಜಿಗಣಿಗೆ ವಾಪಸ್ಸಾಗುವಾಗ ಹೃದಯಾಘಾತವಾಗಿತ್ತು. ದಲಿತ ಸಂಘರ್ಷ ಸಮಿತಿ ಸ್ಥಾಪಕರಲ್ಲಿ ಒಬ್ಬರಾಗಿದ್ದ ಶಂಕರ್ ಅವರು ಶೋಷಿತ ಸಮುದಾಯದ ಪರವಾದ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಶಾಸಕ ಬಿ.ಶಿವಣ್ಣ, ಮಾಜಿ ಶಾಸಕ ಎನ್.ಮಹೇಶ್, ಹೋರಾಟಗಾರರಾದ ವೆಂಕಟಸ್ವಾಮಿ, ಪಟಾಪಟ್ ನಾಗರಾಜ್, ಆನೇಕಲ್ ಕೃಷ್ಣಪ್ಪ, ವೆಂಕಟೇಶ್ ಮೂರ್ತಿ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದರು. ಮೃತರ ಅಂತ್ಯಕ್ರಿಯೆ ಜಿಗಣಿಯ ಅವರ ತೋಟದಲ್ಲಿ ನೆರವೇರಿತು.
ಹೋರಾಟಗಾರ ಜಿಗಣಿ ಶಂಕರ್ ನಿಧನ
Previous articleಪ್ರಧಾನಮಂತ್ರಿಗಳ ನಿರ್ಗಮನ
Next articleವಿಡಿಯೊ ಬಿಡುಗಡೆ ಮಾಡಿದ ಇಸ್ರೊ