Saturday, December 14, 2024
Homeಸುದ್ದಿರಾಜ್ಯಹುಲಿಯ ಮೃತದೇಹ ಪತ್ತೆ

ಹುಲಿಯ ಮೃತದೇಹ ಪತ್ತೆ

ಚಾಮರಾಜನಗರ: ಬಿಆರ್ ಟಿ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವಲಯದಲ್ಲಿ ಮಂಗಳವಾರ ಹುಲಿಯೊಂದರ ಮೃತದೇಹ ಪತ್ತೆಯಾಗಿದೆ. ಬೈಲೂರು ವಲಯದ ಬೆಳ್ಳಾಜೆ ಬೀಟ್ ವ್ಯಾಪ್ತಿಯ ಅತ್ತಿಕಾನೆ ಕಾಫಿ ಎಸ್ಟೇಟ್ ನಲ್ಲಿ ಮೃತದೇಹ ಕಂಡು ಬಂದಿದ್ದು, ಹುಲಿಯ ಎಲ್ಲ ದೇಹದ ಅಂಗಗಳೂ ಇವೆ. ದೇಹದಲ್ಲಿ ಗಾಯದ ಗುರುತುಗಳಿಲ್ಲ ಎಂದು ಬಿಆರ್ ಟಿ ಡಿಸಿಎಫ್ ದೀಪ್ ಜೆ. ಕಾಂಟ್ರ್ಯಾಕ್ಟರ್ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಇನ್ನಷ್ಟು ವಿವರಗಳು ತಿಳಿಯಲಿವೆ ಎಂದು ಅವರು ಹೇಳಿದ್ದಾರೆ. ಹುಲಿಯ ಸಾವಿಗೆ ಕಾರಣ ಪತ್ತೆಹಚ್ಚುವ ಕಾರ್ಯ ಮುಂದಿವರಿದಿದೆ.