ಬೆಂಗಳೂರು: ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಚನ್ನಾ ನಾಯಕ್ ಎನ್ನುವ ವ್ಯಕ್ತಿಯನ್ನು ಬಂಧಿಸಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಒಟ್ಟು ಐದು ಆರೋಪಿಗಳನ್ನು ಇದುವರೆಗೆ ಬಂಧಿಸಲಾಗಿದೆ.
ಬೆಂಗಳೂರಿನಲ್ಲಿ ಪೊಲೀಸರ ಬಲೆಗೆ ಬಿದ್ದಿರುವ ಚನ್ನಾ ನಾಯಕ್ ಈ ಸಂಚಿನಲ್ಲಿ ಹೆಚ್ಚು ಖ್ಯಾತ ಪಾತ್ರವಾಗಿದ್ದ RSS ಪ್ರಚಾರಕ್ ವಿಶ್ವನಾಥ್ ಜೀ ಪಾತ್ರವನ್ನು ವಹಿಸಿದ್ದ ಎನ್ನಲಾಗಿದೆ.
ಈ ಮೊದಲೇ ಕನ್ನಡ ವಾಹಿನಿಯೊಂದಿಗೆ ಮಾತನಾಡಿದ್ದ ಚನ್ನಾ ನಾಯಕ್ ತಾನು ಪೊಲೀಸರಿಗೆ ಶರಣಾಗುವುದಾಗಿ ಹೇಳಿಕೊಂಡಿದ್ದ. ಈತ ಚೈತ್ರಾಳೇ ಈ ಸಂಚಿನ ಮುಖ್ಯ ಆರೋಪಿಯಾಗಿದ್ದು ತಮಗೆಲ್ಲ ಆಕೆ ಧಮಕಿ ಹಾಕಿದ್ದಳು ಎಂದೂ ಹೇಳಿದ್ದ.
ಈ ಟಿಕೆಟ್ ವಂಚನೆ ಪ್ರಕರಣವು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಸಾಗಿದ್ದು ಇನ್ನೊಬ್ಬ ಆರೋಪಿಯಾದ ಹಾಲ ಸ್ವಾಮಿ ತಲೆಮರೆಸಿಕೊಂಡಿದ್ದು ಆತನು ವಿವಿಧೆಡೆ ಆಸ್ತಿ ಮಾಡಿರುವ ಬಗ್ಗೆಯೂ ಸುದ್ದಿಯಾಗಿದೆ.