Saturday, December 14, 2024
Homeರಾಜ್ಯಬೆಂಗಳೂರು ವಿಭಾಗಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ

ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ

ಬೆಂಗಳೂರು: ಉಗಾರ ಖುರ್ದ್‌-ಕುಡಚಿ ಭಾಗದ ನಡುವಿನ ಜೋಡಿ ಮಾರ್ಗದ ಇಂಜಿನಿಯರಿಂಗ್‌ ಕಾಮಗಾರಿ ಸಲುವಾಗಿ ಈ ಕೆಳಗಿನ ಕೆಲವು ರೈಲುಗಳನ್ನು ರದ್ದು/ಭಾಗಶಃ ರದ್ದು/ತಡವಾಗಿ ಪ್ರಾರಂಭ ಮತ್ತು ಮಾರ್ಗ ಮಧ್ಯ ನಿಯಂತ್ರಿಸಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದ.

a) ರೈಲುಗಳು ರದ್ದು:

  1. ರೈಲು ಸಂಖ್ಯೆ 17332 ಎಸ್‌.ಎಸ್‌.ಎಸ್ ಹುಬ್ಬಳ್ಳಿ-ಮಿರಜ್ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಸೆಪ್ಟೆಂಬರ್ 4 ರಿಂದ 8 ರವರೆಗೆ ರದ್ದುಗೊಳಿಸಲಾಗುತ್ತಿದೆ.
  2. ರೈಲು ಸಂಖ್ಯೆ 17333 ಮೀರಜ್-ಕ್ಯಾಸಲ್ ರಾಕ್ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಸೆಪ್ಟೆಂಬರ್ 4 ರಿಂದ 8 ರವರೆಗೆ ರದ್ದುಗೊಳಿಸಲಾಗುತ್ತಿದೆ.
  3. ರೈಲು ಸಂಖ್ಯೆ 17334 ಕ್ಯಾಸಲ್ ರಾಕ್-ಮಿರಾಜ್ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಸೆಪ್ಟೆಂಬರ 4 ರಿಂದ 8 ರವರೆಗೆ ರದ್ದುಗೊಳಿಸಲಾಗುತ್ತಿದೆ.
  4. ರೈಲು ಸಂಖ್ಯೆ 17331 ಮೀರಜ್-ಎಸ್‌.ಎಸ್‌.ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಸೆಪ್ಟೆಂಬರ್ 5 ರಿಂದ 9 ರವರೆಗೆ ರದ್ದುಗೊಳಿಸಲಾಗುತ್ತಿದೆ.

b) ರೈಲುಗಳು ಭಾಗಶಃ ರದ್ದು:

  1. ಸೆಪ್ಟೆಂಬರ್ 3 ರಿಂದ 7 ರವರೆಗೆ ತಿರುಪತಿಯಿಂದ ಪ್ರಾರಂಭವಾಗುವ ರೈಲು ಸಂಖ್ಯೆ 17415 ತಿರುಪತಿ-ಕೊಲ್ಹಾಪುರ ಹರಿಪ್ರಿಯಾ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಬೆಳಗಾವಿ-ಕೊಲ್ಹಾಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ಸೇವೆ ಬೆಳಗಾವಿಯಲ್ಲಿ ಕೊನೆಯಾಗಲಿದೆ.
  2. ರೈಲು ಸಂಖ್ಯೆ 17416 ಕೊಲ್ಹಾಪುರ-ತಿರುಪತಿ ಹರಿಪ್ರಿಯಾ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಕೊಲ್ಹಾಪುರ-ಬೆಳಗಾವಿ ನಿಲ್ದಾಣಗಳ ನಡುವೆ ಸೆಪ್ಟೆಂಬರ್ 4 ರಿಂದ 8 ರವರೆಗೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಹೀಗಾಗಿ ಈ ರೈಲು ತನ್ನ ನಿಗದಿತ ಸಮಯದಲ್ಲಿ ಕೊಲ್ಹಾಪುರ ನಿಲ್ದಾಣದ ಬದಲು ಬೆಳಗಾವಿ ನಿಲ್ದಾಣದಿಂದ ಪ್ರಾರಂಭವಾಗಲಿದೆ.

c) ರೈಲುಗಳು ತಡವಾಗಿ ಪ್ರಾರಂಭ:

  1. ರೈಲು ಸಂಖ್ಯೆ 16590 ಮೀರಜ್-ಕೆ.ಎಸ್‌.ಆರ್ ಬೆಂಗಳೂರು ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲನ್ನು ಸೆಪ್ಟೆಂಬರ್ 3, 4, 5 ರಂದು 40 ನಿಮಿಷ ಹಾಗೂ ಸೆಪ್ಟೆಂಬರ್ 8 ರಂದು 60 ನಿಮಿಷಗಳ ಕಾಲ ಮಿರಜ್‌ ನಿಲ್ದಾಣದಿಂದ ತಡವಾಗಿ ಪ್ರಾರಂಭವಾಗಲಿದೆ.
  2. ರೈಲು ಸಂಖ್ಯೆ 16542 ಪಂಢರಪುರ-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಸೆಪ್ಟೆಂಬರ್ 8 ರಂದು ಪಂಢರಪುರ ನಿಲ್ದಾಣದಿಂದ 60 ನಿಮಿಷ ಕಾಲ ತಡವಾಗಿ ಪ್ರಾರಂಭವಾಗಲಿದೆ.

d) ಮಾರ್ಗ ಮಧ್ಯ ನಿಯಂತ್ರಣ:

  1. ಸೆಪ್ಟೆಂಬರ್ 4 ರಂದು ಎರ್ನಾಕುಲಂ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 11098 ಎರ್ನಾಕುಲಂ-ಪುಣೆ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯ 30 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.
  2. ಸೆಪ್ಟೆಂಬರ್ 4 ರಂದು ಹಜರತ್ ನಿಜಾಮುದ್ದೀನ್‌ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12782 ಹಜರತ್ ನಿಜಾಮುದ್ದೀನ್-ಮೈಸೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯ 30 ನಿಮಿಷ ಕಾಲ ನಿಯಂತ್ರಿಸಲಾಗುತ್ತದೆ.