Saturday, December 14, 2024
Homeಸುದ್ದಿರಾಜ್ಯಕೋಳಿ ಕದಿಯಲು ಬಂದು ಸಿಕ್ಕಿಬಿದ್ದ ಚಿರತೆ

ಕೋಳಿ ಕದಿಯಲು ಬಂದು ಸಿಕ್ಕಿಬಿದ್ದ ಚಿರತೆ

ಕುಣಿಗಲ್: ತಾಲ್ಲೂಕಿನ ಚೌಡನಕುಪ್ಪೆ ಗ್ರಾಮದಲ್ಲಿ ಕೋಳಿ ಕದಿಯಲು ಫಾರ್ಮ್ ಗೆ ನುಗ್ಗಿದ್ದ ಚಿರತೆಯನ್ನು ಸೆರೆ ಹಿಡಿಯಲಾಗಿದೆ.

ವಸಂತಕುಮಾರ ಎಂಬುವರ ಕೋಳಿ ಫಾರಂ ಗೆ ಗುರುವಾರ ಬೆಳಗ್ಗೆ ಚಿರತೆ ನುಗ್ಗಿ ಆತಂಕ ಸೃಷ್ಟಿಸಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಅರಿವಳಿಕೆ ಚುಚ್ಚುಮದ್ದು ನೀಡಿ ವಶಕ್ಕೆ ಪಡೆದಿದ್ದಾರೆ. ಖಾಲಿ ಇದ್ದ ಕೋಳಿ ಫಾರಂ ಗೆ ಮೂರು ವರ್ಷದ ಗಂಡು ಚಿರತೆ ನುಗ್ಗಿದ್ದು, ಎಚ್ಚೆತ್ತ ಮಾಲೀಕರು ಫಾರಂ ಗೇಟಿಗೆ ಬೀಗ ಜಡಿದು, ಅರಣ್ಯಾಧಿಕಾರಿಗಳ ಗಮನಕ್ಕೆ ತಂದರು.

ಬೆಂಗಳೂರಿನ ಬನ್ನೇರುಘಟ್ಟದಿಂದ ಬಂದ ಅರವಳಿಕೆ ತಜ್ಞ ಉಮಾಶಂಕರ್ ನೇತೃತ್ವದ ತಂಡ ಅರವಳಿಕೆ ಚುಚ್ಚುಮದ್ದು ನೀಡಿ ಚಿರತೆ ವಶಕ್ಕೆ ಪಡೆದರು. ಜಿಲ್ಲಾ ಅರಣ್ಯ ಸಂರಕ್ಷಣಾ ಅಧಿಕಾರಿ ಅನುಪಮಾ, ವಲಯ ಅರಣ್ಯಾಧಿಕಾರಿ ಮಹಮ್ಮದ್ ಮನ್ಸೂರ್ ಇದ್ದರು.