ಕೂಡ್ಲಿಗಿ: ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಅಪರಿಚಿತ ವಾನಹಕ್ಕೆ ಕಾರು ಡಿಕ್ಕಿಯಾಗಿ ಕಲಬುರಗಿ ಎಸ್ಪಿ ಹಾಗೂ ಅವರ ಕಾರಿನ ಚಾಲಕ ತೀವ್ರವಾಗಿ ಗಾಯಗೊಂಡಿದ್ದಾರೆ. ಕೂಡ್ಲಿಗಿ ತಾಲ್ಲೂಕಿನ ಅಮಲಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಕಲಬುರಗಿ ಯಲ್ಲಿ ಡಿಸಿಆರ್‍ಇ ಘಟಕದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರವಹಿಸುತ್ತಿರುವ ಸಂಗೀತಾ ಹಾಗೂ ಕಾರಿನ ಚಾಲಕ ದೀಪಕ್ ತೀವ್ರವಾಗಿ ಗಾಯಗೊಂಡಿದ್ದಾರೆ. ಸಂಗೀತಾ ತನ್ನ ಇಬ್ಬರು ಮಕ್ಕಳು ಹಾಗೂ ತಂಗಿಯೊಂದಿಗೆ ಕಲಬುರಗಿ ಯಿಂದ ಬೆಂಗಳೂರು ಕಡೆ ಹೊರಟಿದ್ದಾಗ ರಾತ್ರಿ 12 ಗಂಟೆ ಸಮಯದಲ್ಲಿ ಅಮಲಾಪುರ ಬಳಿ ಮುಂದೆ ಲಹೋಗುತ್ತಿದ್ದ ವಾನವೊಂದರ ಚಾಲಕ ಏಕಾ ಏಕಿ ತನ್ನ ಪಥ ಬದಲಾಯಿಸಿದ್ದಾನೆ. ಈ ವೇಳೆ ಹಿಂಬದಿಯಲ್ಲಿ ಬರುತ್ತಿದ್ದ ಸಂಗೀತಾ ಅವರಿದ್ದ ಕಾರು ಮುಂದೆ ಇದ್ದ ವಾಹನಕ್ಕೆ ಡಿಕ್ಕಿಯಾಗಿದೆ. ಇದರಿಂದ ಎಸ್ಪಿ ಸಂಗೀತಾ ಹಾಗೂ ಕಾರು ಚಾಲಕ ದೀಪಕ್ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ಹೊಸಪೇಟೆಯ ಆಸ್ಪತ್ರೆಗೆ ಕಳಿಸಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕೂಡ್ಲಿಗಿಯಲ್ಲಿ ಕಾರು ಅಪಘಾತ: ಕಲಬರ್ಗಿ ಎಸ್ಪಿಗೆ ಗಾಯ
Previous articleಚಿತ್ರದುರ್ಗದಲ್ಲಿ ಕಾಲರಾ ಪತ್ತೆ: ಆತಂಕದಲ್ಲಿ ಆಶ್ರಯ ಬಡಾವಣೆ ನಿವಾಸಿಗಳು
Next articleಚಂದ್ರನ ಮೇಲೆ ಇಳಿದ ವಿಕ್ರಮ