ಮಂಡ್ಯ: ಮಳವಳ್ಳಿ ತಾಲ್ಲೂಕು ಹಲಗೂರು ಸಮೀಪದ ಬಸವನಬೆಟ್ಟದ ತಿರುವಿನಲ್ಲಿ ಕ್ಯಾಂಟರ್ ಮುಗುಚಿ ಮಹಿಳೆ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಮಳವಳ್ಳಿ ಸಮೀಪದ ತಮ್ಮಡಹಳ್ಳಿ ಗ್ರಾಮದ ಮಂಗಳಮ್ಮ (50) ಮೃತ ಮಹಿಳೆ.
ತಮ್ಮಡಹಳ್ಳಿ ಗ್ರಾಮದ ಮಾರಮ್ಮ ದೇವಸ್ಥಾನಕ್ಕೆ ನೂತನ ಅರ್ಚಕನನ್ನು ಗುರುತಿಸಲು ಒಕ್ಕಲಿಗ ಮತ್ತು ಗಂಗಾ ಮತಸ್ಥ ಸಮುದಾಯಗಳ 200ಕ್ಕೂ ಹೆಚ್ಚು ಮಂದಿ ಮೂರು ಕ್ಯಾಂಟರ್ ಗಳಲ್ಲಿ ಬಸವನಹಳ್ಳಿಗೆ ತೆರಳಿದ್ದರು. ಹೆಬ್ಬೆಟ್ಟದ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಒಟ್ಟಾಗಿ ಪೂಜಾ ಕಾರ್ಯಕ್ರಮ ಮುಗಿಸಿ ಮಂಗಳವಾರ ಸಂಜೆ ವಾಪಸ್ ಬರುವಾಗ ದುರ್ಘಟನೆ ನಡೆದಿದೆ.
ಗಾಯಾಳುಗಳನ್ನು ಮಳವಳ್ಳಿ ತಾಲ್ಲೂಕು ಆಸ್ಪತ್ರೆ ಮತ್ತು ಮಂಡ್ಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.