ಹಾವೇರಿ: ಹಿರೇಕೆರೂರು ಪಟ್ಟಣ ಪಂಚಾಯಿತಿಯ ಪುರಸಭೆ ಮುಖ್ಯಾಧಿಕಾರಿ ಜಿ.ಪಂಪಾಪತಿ ನಾಯ್ಕ ಶನಿವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹಿರೇಕೆರೂರು ಪಟ್ಟಣದ ನಿವಾಸಿ ಸಿವಿಲ್ ಎಂಜಿನಿಯರ್ ಮೊಹಮ್ಮದ್ ಮತ್ತೂರು ಅವರಿಗೆ ನಿವೇಶನದ ಇ–ಸ್ವತ್ತು ಮಾಡಿಕೊಡಲು ಪಂಪಾಪತಿ ಮೊದಲ ಕಂತಾಗಿ ₹10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಕಚೇರಿಯಲ್ಲಿ ಲಂಚ ಪಡೆಯುವ ವೇಳೆ ಹಾವೇರಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಪಂಪಾಪತಿಯನ್ನು ಬಂಧಿಸಿದ್ದಾರೆ.
‘ಹಿರೇಕೆರೂರು ಪಟ್ಟಣದಲ್ಲಿಯೇ ಇರುವ ವಸತಿ ಗೃಹದಲ್ಲಿ ₹₹3.50 ಲಕ್ಷ ನಗದು ಮತ್ತು ಇತರೆ ದಾಖಲಾತಿಗಳು ಲಭ್ಯವಾಗಿವೆ. ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ’ ಎಂದು ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ ತಿಳಿಸಿದ್ದಾರೆ.