ನ್ಯಾಮತಿ(ದಾವಣಗೆರೆ): ತಾಲ್ಲೂಕಿನ ಸವಳಂಗ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಸಾರ್ವಜನಿಕರಲ್ಲಿ ಭೀತಿ ಹುಟ್ಡಿಸಿದ್ದ ಚಿರತೆಯನ್ನು ಗುರುವಾರ ಬೆಳಿಗ್ಗೆ ಮಾದಾಪುರ ಬಳಿ ಸೆರೆಹಿಡಿಯಲಾಗಿದೆ. ಬುಧವಾರ ಮಾದಾಪುರ ಗ್ರಾಮದ ಮೇಗಳಕೇರಿಯ ಕೊಟ್ಟಿಗೆಯೊಂದರಲ್ಲಿ ಕಟ್ಟಿ ಹಾಕಿದ್ದ ಕುರಿಯನ್ನು ಹತ್ತಿರದ ಅರಣ್ಯಕ್ಕೆ ಎಳೆದೊಯ್ದು ತಿಂದು ಹಾಕಿತ್ತು. ಕಳೆದೆ ವಾರ ಕುಂಕುವ ಗ್ರಾಮದಲ್ಲಿ ನಾಯಿಯನ್ನು ಕೊಂದಿತ್ರು. ಜನರು ಅರಣ್ಯ ಇಲಾಖೆಗೆ ಒತ್ತಡ ತಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಮಾದಾಪುರ ಗ್ರಾಮದ ಸರಹದ್ದಿನಲ್ಲಿ ಚಿರತೆ ಸೆರೆ ಹಿಡಿಯಲು ಬೋನನ್ನು ಇಟ್ಟಿದ್ದರು. ಸೆರೆಸಿಕ್ಕ ಚಿರತೆಯನ್ನು ಶಿವಮೊಗ್ಗದ ತಾವರೆಕೊಪ್ಪ ಸಿಂಹದಾಮಕ್ಕೆ ಹೆಚ್ಚಿನ ನಿಗಾಕ್ಕಾಗಿ ಕಳುಹಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಚೇತನ್.ಕೆ.ಆರ್ ತಿಳಿಸಿದ್ದಾರೆ. ಉಪವಲಯ ಅರಣ್ಯಾಧಿಕಾರಿ ಬರ್ಕತ್ ಅಲಿ. ಫಾರೆಸ್ಟರ್ ಕೃಷ್ಣ ಮೂರ್ತಿ ಮತ್ತು ವನಪಾಲಕರು ಮತ್ತು ಪೊಲೀಸರು ಸ್ಥಳದಲ್ಲಿ ಇದ್ದರು.