Saturday, December 14, 2024
Homeಉತ್ತರ ಕರ್ನಾಟಕಬೆಳಗಾವಿಮದುವೆಯಲ್ಲಿ ಊಟ ಮಾಡಿ ಅಸ್ವಸ್ಥ: 68 ಮಂದಿ ಆಸ್ಪತ್ರೆಗೆ

ಮದುವೆಯಲ್ಲಿ ಊಟ ಮಾಡಿ ಅಸ್ವಸ್ಥ: 68 ಮಂದಿ ಆಸ್ಪತ್ರೆಗೆ

ಬೆಳಗಾವಿ: ಮದುವೆಯಲ್ಲಿ ಊಟ ಮಾಡಿ 68 ಮಂದಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿಯಲಲಿ ಮಂಗಳವಾರ ಈ ಘಟನೆ ನಡೆದಿದೆ‌. ಹಿರೇಕೋಡಿಯಲ್ಲಿ ಸೋಮವಾರ ಜಾಕೀರ್ ಪಟೇಲ್ ಎಂಬುವವರ ಪುತ್ರಿ ಮದುವೆ ಆಯೋಜನೆ ಮಾಡಲಾಗಿತ್ತು. ರಾತ್ರಿ ಊರಿನ ಜನ ಬಾಡೂಟ ಸೇವಿಸಿದ್ದರು. ಸೋಮವಾರ ತಡರಾತ್ರಿಯೇ ಕೆಲವರಿಗೆ ವಾಂತಿ ಭೇದಿ ಶುರುವಾಯಿತು. ಅವರು ಗ್ರಾಮದ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಮಂಗಳವಾರ ಬೆಳಿಗ್ಗೆ ಹೆಚ್ಚಿನ ಜನರಿಗೆ ತೀವ್ರ ವಾಂತಿ ಭೇದಿ ಶುರುವಾಯಿತ. ತಕ್ಷಣ ಆಂಬುಲೆನ್ಸಗಳ ಮೂಲಕ 52 ಮಂದಿಯನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಯಿತು. 16 ಮಂದಿ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಕಲುಷಿತ ಆಹಾರ ಸೇವನೆಯಿಂದ ಹೀಗಾಗಿದೆ. ಯಾರಿಗೂ ಪ್ರಾಣಾಪಾಯ ಇಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಚಿಕ್ಕೋಡಿ ಪೊಲೀಸರು ಊರಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.