ಬೆಂಗಳೂರು: ಮಾಗಡಿ ಪಟ್ಟಣಕ್ಕೆ ರಾತ್ರಿ ಬಂದಿರುವ ಕಾಡಾನೆಯೊಂದು ಇಲ್ಲಿನ ಪ್ರವಾಸಿ ಮಂದಿರ ಸೇರಿದಂತೆ, ವಿವಿಧೆಡೆ ಓಡಾಡಿದೆ.
ಶುಕ್ರವಾರ ರಾತ್ರಿ 2 ಗಂಟೆ ಸುಮಾರಿಗೆ ಬೆಳಗುಂಬ, ನಾಗಶೆಟ್ಟಿಹಳ್ಳಿ, ತಗ್ಗಿಕುಪ್ಪೆ ಮಾರ್ಗವಾಗಿ ಮಾಗಡಿ ಪಟ್ಟಣಕ್ಕೆ ಬಂದಿರುವ ಕಾಡಾನೆಯು ಅರಣ್ಯ ಇಲಾಖೆ ಕಚೇರಿ, ಪ್ರವಾಸಿ ಮಂದಿರ, ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ, ತಿರುಮಲೆ ತ್ಯಾಜ್ಯ ಘಟ, ದೇವಾಲಯ ಹಾಗೂ ನರಸಿಂಹ ಗುಡ್ಡ ದಾಟಿ ಸಾಗಿದೆ.
ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು, ಜನವಸತಿ ಪ್ರದೇಶದಿಂದ ಕಾಡಾನೆಯನ್ನು ಓಡಿಸಲು ಹರಸಾಹಸಪಟ್ಟರು. ಕಾಡಾನೆ ಓಡಾಟದ ದೃಶ್ಯಗಳು ಮೊಬೈಲ್ ಗಳಲ್ಲಿ ಹರಿದಾಡುತ್ತಿವೆ.