ಕೋಲಾರ: ನಗರದಲ್ಲಿ ಗುರುವಾರ ಸಂಜೆ ಅಪಹರಣಕ್ಕೆ ಒಳಗಾಗಿದ್ದ ಐದು ವರ್ಷ ಬಾಲಕನನ್ನು ಪೊಲೀಸರು ಶ್ರೀನಿವಾಸಪುರ ತಾಲ್ಲೂಕಿನ ಸೋಮಯಾಜಲಹಳ್ಳಿ ಗ್ರಾಮದಲ್ಲಿ ರಾತ್ರಿ ಪತ್ತೆ ಹಚ್ಚಿದ್ದಾರೆ. ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದಾರೆ. ಲೋಕೇಶ್ ಎಂಬುವರ ಪುತ್ರ ಯಶ್ಮಿತ್ ಗೌಡ ಅಪಹರಣಕ್ಕೆ ಒಳಗಾದ ಬಾಲಕ. ಈತ ಟಮಕದ ಸರ್ ಎಂ.ವಿ ಶಾಲೆಯಲ್ಲಿ ಯುಕೆಜಿ ವಿದ್ಯಾರ್ಥಿ. ದುಷ್ಕರ್ಮಿಗಳು ಕೆಂಪು ಬಣ್ಣದ ಪಲ್ಸರ್ ಬೈಕಿನಲ್ಲಿ ಅಪಹರಿಸಿ ಕೋಲಾರದಿಂದ ಚಿಂತಾಮಣಿ ಮಾರ್ಗವಾಗಿ ತೆರಳಿದರು ಎಂಬ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. ‘ಬಾಲಕ ಸುರಕ್ಷಿತವಾಗಿದ್ದು, ಪೋಷಕರ ವಶಕ್ಕೆ ಒಪ್ಪಿಸಲಾಗಿದೆ. ಪ್ರಕರಣ ದಾಖಲಿಸಿದ್ದು, ಇಬ್ಬರು ಆರೋಪಿಗಳನ್ನು ತನಿಖೆಗೆ ಒಳಪಡಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಎಂ.ನಾರಾಯಣ ತಿಳಿಸಿದರು.