ಮಂಗಳೂರು: ಸಹಪಾಠಿಯಾಗಿರುವ ಯುವತಿ ಜತೆಗೆ ಮಾತನಾಡಿದ್ದನ್ನು ಆಕ್ಷೇಪಿಸಿಮೂಡುಬಿದಿರೆ ಬಸ್ ನಿಲ್ದಾಣದ ಬಳಿ ವಿದ್ಯಾರ್ಥಿಗೆ ಹಲ್ಲೆ ನಡೆಸಲಾಗಿದೆ. ‘ರಾಜೀವ ಗಾಂಧಿ ಕಾಂಪ್ಲೆಕ್ಸ್ ಬಳಿ ಹಿಂದೂ ಧರ್ಮದ ಸಹಪಾಠಿ ವಿದ್ಯಾರ್ಥಿನಿ ಜೊತೆ ಮಾತನಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಮೂವರು ಯುವಕರ ಗುಂಪು ಮುಸ್ಲಿಂ ವಿದ್ಯಾರ್ಥಿಗೆ ಹಲ್ಲೆ ನಡೆಸಿತ್ತು’ ಎಂದು ಪೊಲೀಸ್ ಮಲಗಳು ತಿಳಿಸಿವೆ. ‘ಇಲ್ಲಿನ ಕಾಲೇಜೊಂದರ ವಿದ್ಯಾರ್ಥಿನಿ ಬೆಂಗಳೂರಿಗೆ ತೆರಳಲು ಬಸ್‌ಗಾಗಿ ಸೋಮವಾರ ರಾತ್ರಿ ಬಸ್‌ನಿಲ್ದಾಣದ ಬಳಿ ಕಾಯುತ್ತಿದ್ದ ವೇಳೆ ಆಕೆಯ ಸಹಪಾಠಿಯಾಗಿದ್ದ ಕೋಟೆಬಾಗಿಲಿನ ಮುಸ್ಲಿಂ ಯುವಕ ಆಕೆ ಜೊತೆ ಮಾತನಾಡುತ್ತಾ ನಿಂತಿದ್ದ. ಇದನ್ನು ಕೆಲವು ಸ್ಥಳಿಯರು ಗಮನಿಸಿದ್ದರು. ವಿದ್ಯಾರ್ಥಿನಿ ಕೆಎಸ್ಆರ್ಟಿಸಿ ಬಸ್ ಹತ್ತಿ ತೆರಳಿದ ನಂತರ ಯುವಕರ ತಂಡವೊಂದು ವಿದ್ಯಾರ್ಥಿಗೆ ಹಲ್ಲೆ ನಡೆಸಿತ್ತು. ಹಲ್ಲೆಗೊಳಗಾದ ವಿದ್ಯಾರ್ಥಿ ನೀಡಿದ ದೂರಿನ ಮೇರೆಗೆ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೂಡುಬಿದಿರೆ: ಸಹಪಾಠಿ ಜೊತೆ ಮಾತನಾಡಿದ ವಿದ್ಯಾರ್ಥಿಗೆ ಹಲ್ಲೆ
Previous articleಸುಳ್ಯದಲ್ಲಿ ದಂಪತಿ ಆತ್ಮಹತ್ಯೆ: ಪತ್ತೆಯಾಗದ ಕಾರಣ