I. ರೈಲು ತಡವಾಗಿ ಪ್ರಾರಂಭ/ನಿಯಂತ್ರಣ
ಧಾರವಾಡದ ಲೆವೆಲ್ ಕ್ರಾಸಿಂಗ್ ಗೇಟ್ ನಂ. 297ರಲ್ಲಿ ನಿರ್ವಹಣಾ ಕಾಮಗಾರಿ ಸಲುವಾಗಿ ಈ ಕೆಳಗಿನ ರೈಲುಗಳು ತಡವಾಗಿ ಪ್ರಾರಂಭ ಮತ್ತು ಮಾರ್ಗ ಮಧ್ಯ ನಿಯಂತ್ರಣ ಮಾಡಲಾಗುತ್ತಿದೆ.
- ರೈಲು ಸಂಖ್ಯೆ 07322 ಧಾರವಾಡ-ಸೋಲಾಪುರ ವಿಶೇಷ ಪ್ಯಾಸೆಂಜರ್ ರೈಲನ್ನು ಸೆಪ್ಟೆಂಬರ್ 11 ರಂದು ಧಾರವಾಡ ನಿಲ್ದಾಣದಿಂದ 65 ನಿಮಿಷ ಕಾಲ ತಡವಾಗಿ ಪ್ರಾರಂಭವಾಗಲಿದೆ.
- ರೈಲು ಸಂಖ್ಯೆ 17326 ಮೈಸೂರು-ಬೆಳಗಾವಿ ವಿಶ್ವಮಾನವ ಡೈಲಿ ಎಕ್ಸ್ಪ್ರೆಸ್ ರೈಲನ್ನು ಸೆಪ್ಟೆಂಬರ್ 11 ರಂದು ಮಾರ್ಗ ಮಧ್ಯದಲ್ಲಿ 60 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ.
II. ರೈಲುಗಳ ಸೇವೆಯಲ್ಲಿ ಕೆಲವು ಬದಲಾವಣೆ
ಸೆಪ್ಟೆಂಬರ್ 1 ರಿಂದ ಅಕ್ಟೋಬರ್ 15, 2023 ರವರೆಗೆ ಲಕ್ನೋ ವಿಭಾಗ ವ್ಯಾಪ್ತಿಯ ವಾರಣಾಸಿ ಯಾರ್ಡ್ನ ಮರು ನಿರ್ಮಾಣ ಕಾಮಗಾರಿ ಸಲುವಾಗಿ ಈ ಕೆಳಗಿನ ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎಂದು ಉತ್ತರ ರೈಲ್ವೆ ಮತ್ತು ಪೂರ್ವ ಕೇಂದ್ರ ರೈಲ್ವೆ ವಲಯಗಳು ಸೂಚಿಸಿವೆ.
A) ರೈಲುಗಳ ರದ್ದು:
- ರೈಲು ಸಂಖ್ಯೆ 22687 ಮೈಸೂರು-ವಾರಣಾಸಿ ದ್ವಿ-ಸಾಪ್ತಾಹಿಕ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲಿನ ಸಂಚಾರವನ್ನು ದಿನಾಂಕ 12.09.23, 14.09.23, 19.09.23, 21.09.23, 26.09.23, 28.09.23, 03.10.23, 05.10.23, 10.10.23 ಮತ್ತು 12.10.23 ರಂದು ರದ್ದುಗೊಳಿಸಲಾಗುತ್ತಿದೆ.
- ರೈಲು ಸಂಖ್ಯೆ 22688 ವಾರಣಾಸಿ-ಮೈಸೂರು ದ್ವಿ-ಸಾಪ್ತಾಹಿಕ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲಿನ ಸಂಚಾರವನ್ನು ದಿನಾಂಕ 14.09.23, 16.09.23, 21.09.23, 23.09.23, 28.09.23, 30.09.23, 05.10.23, 07.10.23, 12.10.23 ಮತ್ತು 14.10.23 ರಂದು ರದ್ದುಗೊಳಿಸಲಾಗುತ್ತಿದೆ.
B) ರೈಲುಗಳ ಗಮ್ಯ/ಮೂಲ ನಿಲ್ದಾಣದಲ್ಲಿ ಬದಲಾವಣೆ:
- ದಿನಾಂಕ 22.09.23, 29.09.23, 06.10.23 ಮತ್ತು 13.10.23 ರಂದು ಹುಬ್ಬಳ್ಳಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17323 ಎಸ್.ಎಸ್.ಎಸ್ ಹುಬ್ಬಳ್ಳಿ-ಬನಾರಸ್ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ಬದಲಾದ ಮಾರ್ಗದಲ್ಲಿ ಸಂಚರಿಸುವುದರಿಂದ ವಾರಣಾಸಿ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ. ಈ ರೈಲು ಬನಾರಸ್ ನಿಲ್ದಾಣದ ಬದಲು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ನಿಲ್ದಾಣದಲ್ಲಿ ತನ್ನ ಪ್ರಯಾಣವನ್ನು ಕೋನೆಗೊಳಿಸಲಿದೆ.
- ದಿನಾಂಕ 24.09.23, 01.10.23, 08.10.23 ಮತ್ತು 15.10.23 ರಂದು ಬನಾರಸ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17324 ಬನಾರಸ್-ಎಸ್.ಎಸ್.ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ಬದಲಾದ ಮಾರ್ಗದಲ್ಲಿ ಸಂಚರಿಸುವುದರಿಂದ ವಾರಣಾಸಿ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ. ಈ ರೈಲು ಬನಾರಸ್ ನಿಲ್ದಾಣದ ಬದಲು ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ನಿಲ್ದಾಣದಿಂದ ಪ್ರಾರಂಭವಾಗಲಿದೆ.
ಅನೀಶ್ ಹೆಗಡೆ
ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ
ನೈರುತ್ಯ ರೈಲ್ವೆ, ಹುಬ್ಬಳ್ಳಿ