Saturday, December 14, 2024
Homeರಾಜ್ಯಬೆಂಗಳೂರು ವಿಭಾಗನಕಲಿ ದಾಖಲೆ ಸೃಷ್ಟಿಸಿ 20 ಕೋಟಿ ಸಾಲ‌ : ಆರೋಪಿ ಬಂಧನ

ನಕಲಿ ದಾಖಲೆ ಸೃಷ್ಟಿಸಿ 20 ಕೋಟಿ ಸಾಲ‌ : ಆರೋಪಿ ಬಂಧನ

ಬೆಂಗಳೂರು: ಖಾಲಿ‌ ನಿವೇಶನ, ಫ್ಲ್ಯಾಟ್ ಹಾಗೂ ಮನೆಗಳ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕುಗಳಿಂದ ಸಾಲ‌ ಪಡೆದು ವಂಚಿಸುತ್ತಿದ್ದ ಆರೋಪಿ ಕೃಷ್ಣ ಕುಮಾರ್ ಅವರನ್ನು ಶೇಷಾದ್ರಿಪುರ ಪೊಲೀಸರು ಬಂಧಿಸಿದ್ದಾರೆ.

‘ಬಂಧಿತ ಆರೋಪಿ‌ ಕೃಷ್ಣಕುಮಾರ್ ಹಾಗೂ ಇತರರು, ತಂಡ ರಚಿಸಿಕೊಂಡು ಕೃತ್ಯ ಎಸಗುತ್ತಿದ್ದರು. ಇವರ ವಿರುದ್ದ ಹಲವು ಠಾಣೆಗಳಲ್ಲಿ 9 ಪ್ರಕರಣಗಳು ದಾಖಲಾಗಿದ್ದವು.

‘ಲಗ್ಗೆರೆ ನಿವಾಸಿ ಕೃಷ್ಣ ಕುಮಾರ್, ಅಸಲಿ ಹೆಸರು ಮರೆಮಾಚಿ ನಕಲಿ ಹೆಸರಿನಲ್ಲಿ ದಾಖಲೆ‌ ಸೃಷ್ಟಿಸುತ್ತಿದ್ದ. ನಂತರ, ಯಾರದ್ದೂ ಜಾಗದ ಮೇಲೆ ಸಾಲ ಬೇಕೆಂದು ಬ್ಯಾಂಕ್‌ಗೆ ಅರ್ಜಿ ಸಲ್ಲಿಸುತ್ತಿದ್ದ.’

‘ಅರ್ಜಿ ಸಲ್ಲಿಕೆ ವೇಳೆ ಬಾಡಿಗೆ ಮನೆ ವಿಳಾಸ ನೀಡುತ್ತಿದ್ದ. ದಾಖಲೆಗಳು‌ ನಿಜವೆಂದು ನಂಬಿ ಬ್ಯಾಂಕ್‌ಗಳು ಇದುವರೆಗೂ 20 ಕೋಟಿ ಸಾಲ‌ ನೀಡಿವೆ. ತಿಂಗಳ ಕಂತು ತುಂಬದೇ ಬಾಡಿಗೆ ಮನೆ ಖಾಲಿ‌ ಮಾಡಿಕೊಂಡು ಆರೋಪಿಗಳು ಪರಾರಿಯಾಗುತ್ತಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.