Saturday, December 14, 2024
Homeರಾಜ್ಯಉತ್ತರ ಕರ್ನಾಟಕಪಟಾಕಿ ಅಂಗಡಿಗೆ ಪರವಾನಗಿಯೇ ಇರಲಿಲ್ಲ

ಪಟಾಕಿ ಅಂಗಡಿಗೆ ಪರವಾನಗಿಯೇ ಇರಲಿಲ್ಲ

ಹಾವೇರಿ: ಅಲದಕಟ್ಟಿ ಬಳಿ ಬೆಂಕಿ ಅವಘಡದಿಂದ ಸುಟ್ಟು ಹೋಗಿರುವ ಪಟಾಕಿ ಮಳಿಗೆಗೆ ಪರವಾನಗಿಯೇ ಇರಲಿಲ್ಲ. ಅವಘಡದಲ್ಲಿ ನಾಲ್ಕು ಮಂದಿ ಸಜೀವ ದಹನವಾಗಿ, ಹಲವರು ಗಾಯಗೊಂಡಿದ್ದರು. ಪಟಾಕಿ ಸಂಗ್ರಹಿಸಿಟ್ಟಿದ್ದ ಗೋದಾಮಿಗೆ ಪರವಾನಗಿ ಕೊಟ್ಟಿರಲಿಲ್ಲ. ಗೋದಾಮಿನ ಹೊರಗಡೆ ಶೆಡ್ ಹಾಕುವಾಗ ವೆಲ್ಡಿಂಗ್‌ ಮಾಡುತ್ತಿದ್ದು, ಮುನ್ನೆಚ್ಚರಿಕ ಕ್ರಮ ಅನುಸರಿಸದ ಕಾರಣ ಅವಘಡ ಸಂಭವಿಸಿದೆ ಎಂದು ಸ್ವತಹ ಜಿಲ್ಲಾಧಿಕಾರಿ ರಘುನಂದನ ಮೂರ್ತಿಯವರೇ ಸ್ಪಷ್ಟಪಡಿಸಿದ್ದಾರೆ