Saturday, December 14, 2024
Homeಮಧ್ಯ ಕರ್ನಾಟಕದಾವಣಗೆರೆಪತ್ರಕರ್ತರ 38 ನೇ ರಾಜ್ಯ ಸಮ್ಮೇಳನ ಅರ್ಥಪೂರ್ಣ ಯಶಸ್ಸಿಗೆ ಸಂಪೂರ್ಣ ಸಹಕಾರ: ಕೆ.ವಿ.ಪ್ರಭಾಕರ್

ಪತ್ರಕರ್ತರ 38 ನೇ ರಾಜ್ಯ ಸಮ್ಮೇಳನ ಅರ್ಥಪೂರ್ಣ ಯಶಸ್ಸಿಗೆ ಸಂಪೂರ್ಣ ಸಹಕಾರ: ಕೆ.ವಿ.ಪ್ರಭಾಕರ್

This image has an empty alt attribute; its file name is %E0%B2%AA%E0%B2%A4%E0%B3%8D%E0%B2%B0%E0%B2%95%E0%B2%B0%E0%B3%8D%E0%B2%A4%E0%B2%B0-38-%E0%B2%A8%E0%B3%87-%E0%B2%B0%E0%B2%BE%E0%B2%9C%E0%B3%8D%E0%B2%AF-%E0%B2%B8%E0%B2%AE%E0%B3%8D%E0%B2%AE%E0%B3%87%E0%B2%B3%E0%B2%A8-%E0%B2%85%E0%B2%B0%E0%B3%8D%E0%B2%A5%E0%B2%AA%E0%B3%82%E0%B2%B0%E0%B3%8D%E0%B2%A3-%E0%B2%AF%E0%B2%B6%E0%B2%B8%E0%B3%8D%E0%B2%B8%E0%B2%BF%E0%B2%97%E0%B3%86-%E0%B2%B8%E0%B2%82%E0%B2%AA%E0%B3%82%E0%B2%B0%E0%B3%8D%E0%B2%A3-%E0%B2%B8%E0%B2%B9%E0%B2%95%E0%B2%BE%E0%B2%B0-%E0%B2%95%E0%B3%86.%E0%B2%B5%E0%B2%BF.%E0%B2%AA%E0%B3%8D%E0%B2%B0%E0%B2%AD%E0%B2%BE%E0%B2%95%E0%B2%B0%E0%B3%8D-1024x683.jpg

ದಾವಣಗೆರೆ : ಕರ್ನಾಟಕ ಕಾರ್ಯನಿರತರ ಪತ್ರಕರ್ತರ ಸಂಘದ 38 ನೇ ರಾಜ್ಯ ಸಮ್ಮೇಳನ ಅರ್ಥಪೂರ್ಣವಾಗಿ ನೆರವೇರಲು ಅಗತ್ಯವಾದ ಎಲ್ಲಾ ರೀತಿಯ ಸಹಕಾರವನ್ನು ಸರ್ಕಾರದಿಂದ ಒದಗಿಸಿಕೊಡಲಾಗುವುದು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ನುಡಿದರು.‌ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ 38 ನೇ ಪತ್ರಕರ್ತರ ಸಮ್ಮೇಳನದ ಪೂರ್ವ ಸಿದ್ಧತಾ ಸಭೆಯನ್ನು ಉದ್ಘಾಟಿಸಿ, ಸಮ್ಮೇಳನದ ವೆಬ್ ಸೈಟ್ ಆರಂಭಿಸಿ ಮಾತನಾಡಿದರು. ಮೊದಲೆಲ್ಲಾ ಪತ್ರಕರ್ತರ ಸಮ್ಮೇಳನಗಳು ನಡೆಯುವಾಗ ಸರ್ಕಾರದ ನೆರವು ಸೂಕ್ತವಾಗಿ ದೊರೆಯುತ್ತಿರಲಿಲ್ಲ. 2013 ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮೊದಲ ಬಾರಿ ದೊಡ್ಡ ಮಟ್ಟದಲ್ಲಿ ಸ್ಪಂದಿಸಿ 15 ಲಕ್ಷ ರೂ ನೆರವು ನೀಡಿದ್ದರು. 2023 ರ ಈ ಸಮ್ಮೇಳನದಲ್ಲೂ ಅಷ್ಟೆ ದೊಡ್ಡ ಮಟ್ಟದ ನೆರವು ದೊರಕಿಸಿಕೊಡಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು. ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಪತ್ರಿಕೋದ್ಯಮದ ಸಾಧ್ಯತೆಗಳನ್ನು ವಿಸ್ತರಿಸುತ್ತಿರುವ ರೀತಿಯಲ್ಲೇ ಹಲವು ಸವಾಲುಗಳನ್ನು ಸೃಷ್ಟಿಸುತ್ತಿದೆ. ಈ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಬೇಕಾದ ಸಿದ್ದತೆ ಮತ್ತು ತರಬೇತಿ ಪತ್ರಕರ್ತ ಸಮೂಹಕ್ಕೆ ದೊರಕಬೇಕಿದೆ. ಈ ಎಲ್ಲಾ ಸಂಗತಿಗಳು ಸಮ್ಮೇಳನದಲ್ಲಿ ಚರ್ಚೆ ಆಗಲಿ ಎಂದು ಆಶಿಸಿದರು. ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಎಂ.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಕ್ರುದ್ದೀನ್, ವಾರ್ತಾಧಿಕಾರಿ ಧನಂಜಯಪ್ಪ ಉಪಸ್ಥಿತರಿದ್ದರು.