Saturday, December 14, 2024
Homeರಾಜ್ಯಬೆಂಗಳೂರು ವಿಭಾಗಪ್ಲಾಸ್ಟಿಕ್ ಹಾವು ಏಣಿ ಆಟದ ಮೂಲಕ ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಜಾಗೃತಿ

ಪ್ಲಾಸ್ಟಿಕ್ ಹಾವು ಏಣಿ ಆಟದ ಮೂಲಕ ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಜಾಗೃತಿ

ಪ್ಲಾಸ್ಟಿಕ್ ಹಾವು  ಏಣಿ ಆಟದ ಮೂಲಕ ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಜಾಗೃತಿ
ಪ್ಲಾಸ್ಟಿಕ್ ಹಾವು ಏಣಿ ಆಟದ ಮೂಲಕ ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಜಾಗೃತಿ

ಬೆಂಗಳೂರು : ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗವು ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ (WWF) ಭಾರತದ ಕರ್ನಾಟಕ ರಾಜ್ಯ ಕಛೇರಿಯ ಸಹಯೋಗದೊಂದಿಗೆ ಕೆ. ಎಸ್. ಆರ್. ಬೆಂಗಳೂರು ರೈಲು ನಿಲ್ದಾಣದಲ್ಲಿ “ಪ್ಲಾಸ್ಟಿಕ್ ಹಾವುಗಳು ಮತ್ತು ಏಣಿಗಳು” ಎಂಬ ವಿನೂತನ ಉಪಕ್ರಮವನ್ನು ಆಯೋಜಿಸಿದೆ.

ಪ್ರಯಾಣಿಕರ ಒಳಗೊಳ್ಳುವಿಕೆಯೊಂದಿಗೆ ಈ ಚಟುವಟಿಕೆಯು ಪ್ಲಾಸ್ಟಿಕ್ ಮಾಲಿನ್ಯದ ನಿರ್ಣಾಯಕ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವ ಮತ್ತು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಮಹತ್ವದ ಬಗ್ಗೆ ರೈಲ್ವೆ ನಿಲ್ದಾಣದ ಸಂದರ್ಶಕರನ್ನು ಜಾಗೃತಗೊಳಿಸುವ ಗುರಿಯನ್ನು ಹೊಂದಿದೆ.

ಹಾವುಗಳ ಬದಲಿಗೆ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಏಣಿಗಳ ಬದಲಿಗೆ ಬಳ್ಳಿಗಳು / ಮರಗಳು ಇವೆ. ಆಟವು ಆಟಗಾರರಿಗೆ ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಉಪಯುಕ್ತ ಸಂಗತಿಗಳನ್ನು ನೀಡುತ್ತದೆ ಮತ್ತು ಪ್ಲಾಸ್ಟಿಕ್ ಬಳಕೆಯನ್ನು ಹೇಗೆ ಕಡಿಮೆ ಮಾಡುವುದು ಎಂಬುದರ ಕುರಿತು ಸಲಹೆಗಳನ್ನು ನೀಡುತ್ತದೆ.

WWFನಿಂದ ನಿಯೋಜಿತರಾದ ಸ್ವಯಂಸೇವಕರು ಸಂದರ್ಶಕರಿಗೆ ಮಾರ್ಗದರ್ಶನ ನೀಡುತ್ತಾರೆ ಮತ್ತು ಆಟದ ನಿಯಮಗಳನ್ನು ವಿವರಿಸುತ್ತಾರೆ.

ಕೆ. ಎಸ್. ಆರ್. ಬೆಂಗಳೂರು ರೈಲು ನಿಲ್ದಾಣದಲ್ಲಿ 28.09.2023 ರಂದು ಪ್ರಾರಂಭವಾದ ಈ ಜಾಗೃತಿ ಆಟವು 02.10.2023 ರವರೆಗೆ ಮುಂದುವರಿಯುತ್ತದೆ.

ಕಳೆದ 3 ದಿನಗಳಲ್ಲಿ, ದೇಶದ ನಾನಾ ಭಾಗಗಳ ಮಕ್ಕಳು ಮತ್ತು ಹಿರಿಯರು ಜಾಗೃತಿ ಮೂಡಿಸುವ ಈ ಚಟುವಟಿಕೆಯಲ್ಲಿ ಭಾಗವಹಿಸಿದ್ದಾರೆ. ಈ ಉಪಕ್ರಮಕ್ಕೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀ ಯೋಗೀಶ್ ಮೋಹನ್ ಅವರು ಉಪಕ್ರಮವನ್ನು ಶ್ಲಾಘಿಸಿದ್ದಾರೆ.

ಈ ಉಪಕ್ರಮದ ಕುರಿತು ಮಾತನಾಡಿದ WWF ಇಂಡಿಯಾದ ಕರ್ನಾಟಕ ರಾಜ್ಯ, ಕಛೇರಿಯ ನಿರ್ದೇಶಕರಾದ ಶ್ರೀ ರಾಹುಲ್ ಸುಂದರರಾಜನ್, KSR ಬೆಂಗಳೂರು ರೈಲು ನಿಲ್ದಾಣದಲ್ಲಿ “WWF-ಭಾರತದ “ಪ್ಲಾಸ್ಟಿಕ್ ಹಾವುಗಳು ಮತ್ತು ಏಣಿಗಳು” ಉಪಕ್ರಮವು ಕ್ರಿಯಾತ್ಮಕ ಮತ್ತು ತೊಡಗಿಸಿಕೊಳ್ಳುವ ಅಭಿಯಾನವಾಗಿದೆ, ಇದು ಮನರಂಜನೆ ಮತ್ತು ಶಿಕ್ಷಣವನ್ನು ಚತುರತೆಯಿಂದ ಸಂಯೋಜಿಸುತ್ತದೆ. ಇದು ಪ್ಲಾಸ್ಟಿಕ್ ಬಗ್ಗೆ ನಿರ್ಣಾಯಕ ಜ್ಞಾನವನ್ನು ನೀಡುವುದು ಮಾತ್ರವಲ್ಲದೆ ಅದರ ಬಳಕೆಯನ್ನು ಹೇಗೆ ಕಡಿಮೆ ಮಾಡುವುದು ಎಂಬುದರ ಕುರಿತು ಹೆಚ್ಚಿನ ಅರಿವನ್ನು ನೀಡುತ್ತದೆ, ಅನನ್ಯ ಮತ್ತು ಪರಿಣಾಮಕಾರಿ ಅನುಭವವನ್ನು ಸೃಷ್ಟಿಸುತ್ತದೆ. ಶ್ರೀಮತಿ ಕುಸುಮಾ ಹರಿಪ್ರಸಾದ್ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ, ಮತ್ತು ಶ್ರೀಮತಿ ಪ್ರಿಯಾ – ಸೀನಿಯರ್. ವಿಭಾಗೀಯ ಪರಿಸರ ಮತ್ತು ಹೌಸ್‌ಕೀಪಿಂಗ್ ಮ್ಯಾನೇಜರ್, ತಂಡಕ್ಕೆ ಮತ್ತು ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ನಿರಂತರ ಬೆಂಬಲ ಮತ್ತು ಸಹಾಯಕ್ಕಾಗಿ ನಾವು ಅತ್ಯಂತ ಕೃತಜ್ಞರಾಗಿರುತ್ತೇವೆ. ” ಎಂದು ತಿಳಿಸಿದ್ದಾರೆ.