ಬೆಂಗಳೂರು : ಆಧುನೀಕರಣ, ಜಾಗತೀಕರಣದ ಪ್ರವಾಹದಲ್ಲಿಯೂ ಹೊಸತನಕ್ಕೆ ತೆರೆದುಕೊಳ್ಳುವ ಮೂಲಕ ಅಂಚೆ ಇಲಾಖೆ ಉತ್ತಮ ಸೇವೆ ಒದಗಿಸುತ್ತಿರುವುದು ಪ್ರಶಂಸಾರ್ಹ ಎಂದು ಲೇಖಕಿ ಗೊರೂರು ಪಂಕಜ ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಅಂಚೆ ದಿನದ ಅಂಗವಾಗಿ ಬೆಂಗಳೂರಿನ ರಾಜಾಜಿನಗರದ ಮುಖ್ಯ ಅಂಚೆ ಕಚೇರಿಯಲ್ಲಿಂದು ಹಮ್ಮಿಕೊಂಡಿದ್ದ “ರಾಷ್ಟ್ರೀಯ ಅಂಚೆ ಸಪ್ತಾಹ ” ವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದ ಅವಿಭಾಜ್ಯ ಅಂಗವಾಗಿರುವ ಭಾರತೀಯ ಅಂಚೆ ಸೇವೆ ವಿಶ್ವದಲ್ಲೇ ಅತ್ಯಂತ ದೊಡ್ಡ ಸಂಪರ್ಕ ಜಾಲವನ್ನು ಹೊಂದಿದ್ದು, ಖಾಸಗಿ ಸಂಸ್ಥೆಗಳೊಂದಿಗೆ ಅಂಚೆ ಇಲಾಖೆ
ರಾಜಾಜಿನಗರ ಮುಖ್ಯ ಅಂಚೆ ಕಚೇರಿಯ ಹಿರಿಯ ಅಧಿಕಾರಿಗಳಾದ ಶ್ರೀಮತಿ ಸಿ.ಸೆಲ್ವಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸೇವಾ ಮನೋಭಾವದಿಂದ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಕಾರ್ಯವೈಕರಿಯನ್ನು ಸ್ಮರಿಸಿದರು.
ರಾಜಾಜಿನಗರ ಮುಖ್ಯ ಅಂಚೆ ಕಚೇರಿಯ ಸಹಾಯಕ ಅಂಚೆ ಅಧಿಕಾರಿಗಳಾದ ಕೋಕಿಲಾ, ರಾಜೇಶ್, ಜಗದೀಶ್, ಭಾವನಾ ಇತರರು ಉಪಸ್ಥಿತರಿದ್ದರು.