Saturday, December 14, 2024
Homeರಾಜ್ಯಉತ್ತರ ಕರ್ನಾಟಕರೈಲುಗಳ ಸೇವೆಯಲ್ಲಿ ಬದಲಾವಣೆ

ರೈಲುಗಳ ಸೇವೆಯಲ್ಲಿ ಬದಲಾವಣೆ

ಉಗಾರ ಖುರ್ದ್-ಕುಡಚಿ ಭಾಗದ ನಡುವಿನ ಜೋಡಿ ಮಾರ್ಗದ ಇಂಜಿನಿಯರಿಂಗ್ ಕಾಮಗಾರಿ ಸಲುವಾಗಿ ಈ ಕೆಳಗಿನ ಕೆಲವು ರೈಲುಗಳನ್ನು ರದ್ದು/ಭಾಗಶಃ ರದ್ದು/ತಡವಾಗಿ ಪ್ರಾರಂಭ ಮತ್ತು ಮಾರ್ಗ ಮಧ್ಯ ನಿಯಂತ್ರಿಸಲಾಗುತ್ತಿದೆ. ಅವುಗಳ ಮಾಹಿತಿ ಕೆಳಗಿನಂತಿವೆ.

A. ರೈಲುಗಳು ರದ್ದು:

  1. ರೈಲು ಸಂಖ್ಯೆ 17332 ಎಸ್.ಎಸ್.ಎಸ್ ಹುಬ್ಬಳ್ಳಿ-ಮಿರಜ್ ಡೈಲಿ ಎಕ್ಸ್ಪ್ರೆಸ್, ರೈಲು ಸಂಖ್ಯೆ 17333/17334 ಮೀರಜ್-ಕ್ಯಾಸಲ್ ರಾಕ್-ಮೀರಜ್ ಡೈಲಿ ಎಕ್ಸ್ಪ್ರೆಸ್ ರೈಲುಗಳನ್ನು ಸೆಪ್ಟೆಂಬರ್ 22 ರಿಂದ 26 ರವರೆಗೆ ರದ್ದುಗೊಳಿಸಲಾಗುತ್ತಿದೆ.
  2. ರೈಲು ಸಂಖ್ಯೆ 17331 ಮೀರಜ್-ಎಸ್.ಎಸ್.ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ಪ್ರೆಸ್ ರೈಲನ್ನು ಸೆಪ್ಟೆಂಬರ್ 23 ರಿಂದ 27 ರವರೆಗೆ ರದ್ದುಗೊಳಿಸಲಾಗುತ್ತಿದೆ.

B. ರೈಲುಗಳ ಭಾಗಶಃ ರದ್ದು:

  1. ಸೆಪ್ಟೆಂಬರ್ 21 ರಿಂದ 25 ರವರೆಗೆ ತಿರುಪತಿಯಿಂದ ಪ್ರಾರಂಭವಾಗುವ ರೈಲು ಸಂಖ್ಯೆ 17415 ತಿರುಪತಿ-ಕೊಲ್ಹಾಪುರ ಹರಿಪ್ರಿಯಾ ಡೈಲಿ ಎಕ್ಸ್ಪ್ರೆಸ್ ರೈಲನ್ನು ಬೆಳಗಾವಿ-ಕೊಲ್ಹಾಪುರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ಸೇವೆ ಬೆಳಗಾವಿಯಲ್ಲಿ ಕೊನೆಯಾಗಲಿದೆ.
  2. ರೈಲು ಸಂಖ್ಯೆ 17416 ಕೊಲ್ಹಾಪುರ-ತಿರುಪತಿ ಹರಿಪ್ರಿಯಾ ಡೈಲಿ ಎಕ್ಸ್ಪ್ರೆಸ್ ರೈಲನ್ನು ಕೊಲ್ಹಾಪುರ-ಬೆಳಗಾವಿ ನಿಲ್ದಾಣಗಳ ನಡುವೆ ಸೆಪ್ಟೆಂಬರ್ 22 ರಿಂದ 26 ರವರೆಗೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಹೀಗಾಗಿ ಈ ರೈಲು ಕೊಲ್ಹಾಪುರ ನಿಲ್ದಾಣದ ಬದಲು ಬೆಳಗಾವಿ ನಿಲ್ದಾಣದಿಂದ ತನ್ನ ನಿಗದಿತ ಸಮಯದಲ್ಲಿ ಪ್ರಾರಂಭವಾಗಲಿದೆ.

C. ರೈಲುಗಳು ತಡವಾಗಿ ಪ್ರಾರಂಭ:

  1. ರೈಲು ಸಂಖ್ಯೆ 16590 ಮೀರಜ್-ಕೆ.ಎಸ್.ಆರ್ ಬೆಂಗಳೂರು ರಾಣಿ ಚೆನ್ನಮ್ಮ ಎಕ್ಸ್ಪ್ರೆಸ್ ರೈಲನ್ನು ಸೆಪ್ಟೆಂಬರ್ 22 ರಿಂದ 24 ರವರೆಗೆ 40 ನಿಮಿಷ ಹಾಗೂ ಸೆಪ್ಟೆಂಬರ್ 26 ರಂದು 60 ನಿಮಿಷಗಳ ಕಾಲ ಮಿರಜ್ ನಿಲ್ದಾಣದಿಂದ ತಡವಾಗಿ ಪ್ರಾರಂಭವಾಗಲಿದೆ.

D. ಮಾರ್ಗ ಮಧ್ಯ ನಿಯಂತ್ರಣ:

  1. ಸೆಪ್ಟೆಂಬರ್ 25 ರಂದು ಎರ್ನಾಕುಲಂ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 11098 ಎರ್ನಾಕುಲಂ-ಪುಣೆ ಎಕ್ಸ್ಪ್ರೆಸ್ ರೈಲನ್ನು ಮಾರ್ಗ ಮಧ್ಯ 60 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.

E. ಮಾರ್ಗ ಬದಲಾವಣೆ:

  1. ಸೆಪ್ಟೆಂಬರ್ 25 ರಂದು ಹಜರತ್ ನಿಜಾಮುದ್ದೀನ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12782 ಹಜರತ್ ನಿಜಾಮುದ್ದೀನ್-ಮೈಸೂರು ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಅಹ್ಮದನಗರ್, ದೌಂಡ್, ಕುರ್ದುವಾಡಿ, ಪಕ್ನಿ, ಸೋಲಾಪುರ, ಹೊಟಗಿ, ವಿಜಯಪುರ, ಗದಗ ಮತ್ತು ಎಸ್.ಎಸ್.ಎಸ್ ಹುಬ್ಬಳ್ಳಿ ಬದಲಾದ ಮಾರ್ಗದ ಮೂಲಕ ಸಂಚರಿಸಲಿದೆ, ಹೀಗಾಗಿ ದೌಂಡ್ ಕಾರ್ಡ್ ಲೈನ್, ಪುಣೆ, ಸತಾರಾ, ಕರಾಡ , ಸಾಂಗ್ಲಿ, ಮಿರಜ್, ಬೆಳಗಾವಿ ಮತ್ತು ಧಾರವಾಡ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.