Saturday, December 14, 2024
Homeಸುದ್ದಿರಾಜ್ಯರೈಲುಗಳಿಗೆ ತಾತ್ಕಾಲಿಕ ಬೋಗಿಗಳ ಜೋಡಣೆ

ರೈಲುಗಳಿಗೆ ತಾತ್ಕಾಲಿಕ ಬೋಗಿಗಳ ಜೋಡಣೆ

ಹುಬ್ಬಳ್ಳಿ : ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಈ ಕೆಳಗಿನ ರೈಲುಗಳಿಗೆ ತಾತ್ಕಾಲಿಕ ಆಧಾರದ ಮೇಲೆ ಹೆಚ್ಚುವರಿ ಬೋಗಿಗಳನ್ನು ಜೋಡಿಸಲು ನೈರುತ್ಯ ರೈಲ್ವೆ ವಲಯವು ನಿರ್ಧರಿಸಿದೆ. ಅವುಗಳ ವಿವರ ಈ ಕೆಳಗಿನಂತಿವೆ.

  1. ರೈಲು ಸಂಖ್ಯೆ 07339 ಎಸ್‌.ಎಸ್‌.ಎಸ್ ಹುಬ್ಬಳ್ಳಿ – ಕೆ.ಎಸ್‌.ಆರ್ ಬೆಂಗಳೂರು ವಿಶೇಷ ಡೈಲಿ ಎಕ್ಸ್‌ಪ್ರೆಸ್ ರೈಲಿಗೆ ತಾತ್ಕಾಲಿಕವಾಗಿ ಮೂರು ಹೆಚ್ಚುವರಿ ಸ್ಲೀಪರ್ ಕ್ಲಾಸ್ ಬೋಗಿಗಳನ್ನು ಸೆಪ್ಟೆಂಬರ್ 14 ರಿಂದ 19, 2023 ರವರೆಗೆ ಜೋಡಿಸಲಾಗುತ್ತಿದೆ.
  2. ರೈಲು ಸಂಖ್ಯೆ 07340 ಕೆ.ಎಸ್‌.ಆರ್ ಬೆಂಗಳೂರು-ಎಸ್‌.ಎಸ್‌.ಎಸ್ ಹುಬ್ಬಳ್ಳಿ ವಿಶೇಷ ಡೈಲಿ ಎಕ್ಸ್‌ಪ್ರೆಸ್ ರೈಲಿಗೆ ತಾತ್ಕಾಲಿಕವಾಗಿ ಮೂರು ಹೆಚ್ಚುವರಿ ಸ್ಲೀಪರ್ ಕ್ಲಾಸ್ ಬೋಗಿಗಳನ್ನು ಸೆಪ್ಟೆಂಬರ್ 15 ರಿಂದ 20, 2023 ರವರೆಗೆ ಜೋಡಿಸಲಾಗುತ್ತಿದೆ.
  3. ರೈಲು ಸಂಖ್ಯೆ 12079 ಕೆ.ಎಸ್‌.ಆರ್ ಬೆಂಗಳೂರು- ಎಸ್‌.ಎಸ್‌.ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ರೈಲಿಗೆ ತಾತ್ಕಾಲಿಕವಾಗಿ ಒಂದು ಹೆಚ್ಚುವರಿ ನಾನ್-ಎಸಿ ಚೇರ್ ಕಾರ್ ಬೋಗಿಯನ್ನು ಸೆಪ್ಟೆಂಬರ್ 15 ರಿಂದ 18, 2023 ರವರೆಗೆ ಜೋಡಿಸಲಾಗುತ್ತಿದೆ.
  4. ರೈಲು ಸಂಖ್ಯೆ 12080 ಎಸ್‌.ಎಸ್‌.ಎಸ್ ಹುಬ್ಬಳ್ಳಿ-ಕೆ.ಎಸ್‌.ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ರೈಲಿಗೆ ತಾತ್ಕಾಲಿಕವಾಗಿ ಒಂದು ಹೆಚ್ಚುವರಿ ನಾನ್-ಎಸಿ ಚೇರ್ ಕಾರ್ ಬೋಗಿಯನ್ನು ಸೆಪ್ಟೆಂಬರ್ 15 ರಿಂದ 18, 2023 ರವರೆಗೆ ಜೋಡಿಸಲಾಗುತ್ತಿದೆ.
  5. ರೈಲು ಸಂಖ್ಯೆ 17309 ಯಶವಂತಪುರ-ವಾಸ್ಕೋ-ಡ-ಗಾಮಾ ಡೈಲಿ ಎಕ್ಸ್‌ಪ್ರೆಸ್ ರೈಲಿಗೆ ತಾತ್ಕಾಲಿಕವಾಗಿ ಒಂದು ಹೆಚ್ಚುವರಿ ಎಸಿ ತ್ರಿ ಟೈಯರ್‌ ಬೋಗಿಯನ್ನು ಸೆಪ್ಟೆಂಬರ್ 14 ರಿಂದ ಅಕ್ಟೋಬರ್ 5, 2023 ರವರೆಗೆ ಜೋಡಿಸಲಾಗುತ್ತಿದೆ.
  6. ರೈಲು ಸಂಖ್ಯೆ 17310 ವಾಸ್ಕೋ-ಡ-ಗಾಮಾ-ಯಶವಂತಪುರ ಡೈಲಿ ಎಕ್ಸ್‌ಪ್ರೆಸ್ ರೈಲಿಗೆ ತಾತ್ಕಾಲಿಕವಾಗಿ ಒಂದು ಹೆಚ್ಚುವರಿ ಎಸಿ ತ್ರಿ ಟೈಯರ್ ಬೋಗಿಯನ್ನು ಸೆಪ್ಟೆಂಬರ್ 13 ರಿಂದ ಅಕ್ಟೋಬರ್ 4, 2023 ರವರೆಗೆ ಜೋಡಿಸಲಾಗುತ್ತಿದೆ.

ಅನೀಶ್ ಹೆಗಡೆ

ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ

ನೈರುತ್ಯ ರೈಲ್ವೆ, ಹುಬ್ಬಳ್ಳಿ