Saturday, December 14, 2024
Homeಸುದ್ದಿರಾಜ್ಯರಾಮನಗರದಲ್ಲಿ ವಿದ್ಯಾರ್ಥಿನಿಗೆ ಚಾಕು ಇರಿದು, ಕಿಡ್ನ್ಯಾಪ್

ರಾಮನಗರದಲ್ಲಿ ವಿದ್ಯಾರ್ಥಿನಿಗೆ ಚಾಕು ಇರಿದು, ಕಿಡ್ನ್ಯಾಪ್

ರಾಮನಗರ: ಯುವಕರ ಗುಂಪೊಂದು ನಗರದ ಮಹಿಳಾ ಪಿಯು ಕಾಲೇಜು ಎದುರು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಂಜನಾ ಎಂಬುವವರಿಗೆ ಸೋಮವಾರ ಚಾಕುವಿನಿಂದ ಇರಿದು, ಕಾರಿನಲ್ಲಿ ಅಪಹರಿಸಿದ್ದಾರೆ.

ಕನಕಪುರದ ದಾಳಿಂಬ ಗ್ರಾಮದ ಕುಮಾರ್ ಮಯ ಕನ್ಯಾ ಅವರ ಪುತ್ರಿಯಾದ ಸಂಜನಾ ಬೆಳಿಗ್ಗೆ 9.15ರ ಸುಮಾರಿಗೆ ಸಹಪಾಠಿಗಳೊಂದಿಗೆ ಕಾಲೇಜಿಗೆ ಬರುತ್ತಿದ್ದರು. ಯುವತಿ ಕಾಲೇಜು ಪ್ರವೇಶದ್ವಾರಕ್ಕೆ ಬರುತ್ತಿದ್ದಂತೆ, ಕಾರಲ್ಲಿ ಬಂದ ಗುಂಪಿನ ಪೈಕಿ ಒಬ್ಬಾತ ಯುವತಿಗೆ ಚಾಕುವಿನಿಂದ ಇರಿದಿದ್ದಾನೆ.

ನೋವಿನಿಂದ ಕುಸಿದ ಯುವತಿಯನ್ನು ಕಾರಿನೊಳಕ್ಕೆ ಎಳೆದುಕೊಂಡು ಪರಾರಿಯಾಗಿದ್ದಾರೆ. ಘಟನೆ ಗಮನಿಸಿದ ಸ್ಥಳದಲ್ಲಿದ್ದವರು ಕಾರಿಗೆ ಕಲ್ಲು ತೂರಿ ತಡೆಯಲು ಯತ್ನಿಸಿದ್ದಾರೆ. ಆದರೂ, ನಿಲ್ಲಿಸದೆ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಘಟನೆಯನ್ನು ಕಾಲೇಜಿನ ಉಪನ್ಯಾಸಕರಿಗೆ ತಿಳಿಸಿದಾಗ, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಪಡೆದಿದ್ದಾರೆ.