Saturday, December 14, 2024
Homeಕ್ರೀಡೆಇತರರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಹರಿಹರಕ್ಕೆ ಪ್ರಶಸ್ತಿ

ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಹರಿಹರಕ್ಕೆ ಪ್ರಶಸ್ತಿ

ಛತ್ತಿಸ್‍ಘಡ ರಾಜ್ಯದ ಬಿಲಯ್ ನಗರದಲ್ಲಿ ಆಗಸ್ಟ್ 25ರಿಂದ 28ರವರೆಗೆ ನಡೆದ 29ನೇ ರಾಷ್ಟ್ರೀಯ ಬೆಂಚ್ ಪ್ರೆಸ್ ಹಾಗು ಡೆಡ್ ಲಿಫ್ಟಿಂಗ್ ಸ್ಪರ್ಧೆಗಳು ಪುರುಷರ, ಮಹಿಳೆಯರ ಹಾಗು ಮಾಸ್ಟರ್ಸ್ ವಿಭಾಗದಲ್ಲಿ ನಡೆದಿದ್ದವು.

ಈ ಸ್ಪರ್ದೆಗಳಲ್ಲಿ ಹರಿಹರ ಬ್ರದರ್ಸ್ ಜಿಮ್‍ನಿಂದ 4 ಜನ ಕ್ರೀಡಾಪಟುಗಳು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ, 59 ಕೆಜಿ ವಿಭಾಗದಲ್ಲಿ ಖಾಜ ಮೋಹಿನೋದ್ದಿನ್ ಅವರು ಭಾಗವಹಿಸಿ ಬೆಸ್ಟ್ ಬೆಂಚ್ ಪ್ರೆಸರ್ ಅಫ್ ಇಂಡಿಯಾ-2023ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಮುಂದೆ ನಡೆಯಲಿರುವ ಅಂತರರಾಷ್ಟ್ರೀಯ ಬೆಂಚ್ ಸ್ಪರ್ದೆಗಳಿಗೆ ಅಯ್ಕೆಯಾಗಿರುತ್ತಾರೆ. ಇದೇ ಸ್ಪರ್ಧೆಗಳಲ್ಲಿ 73 ಕೆಜಿ ತೂಕದ ವಿಭಾಗದಲ್ಲಿ ಶಹಾಬಾಜ್ ಅವರು ಕಂಚಿನ ಪದಕವನ್ನು ಗೆದ್ದಿದ್ದಾರೆ. ವಿಜೇತ ಕ್ರೀಡಾಪಟುಗಳಿಗೆ ಬ್ರದರ್ಸ್ ಜಿಮ್ನಾ ಸಂಚಾಲಕ, ಅಂತರಾಷ್ಟ್ರೀಯ ದೇಹದಾಢ್ರ್ಯ ಪಟು ಅಕ್ರಂ ಬಾಷ, ತರಬೇತುದಾರ ಮಹಮ್ಮದ್ ರಫೀಕ್ ಸೇರಿದಂತೆ ಎಲ್ಲಾ ಕ್ರೀಡಾಪಟುಗಳು ಶುಭ ಹಾರೈಸಿದ್ದಾರೆ.