ದೆಹಲಿ: ಸಂವಿಧಾನದ ಪೀಠಿಕೆಯಿಂದ ಜಾತ್ಯತೀತ ಮತ್ತು ಸಮಾಜವಾದಿ ಪದಗಳನ್ನು ತೆಗೆದುಹಾಕಲಾಗಿದೆ ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ. ಮಂಗಳವಾರ ಸಂಸದರಿಗೆ ನೀಡಲಾದ ಸಂವಿಧಾನದ ಹೊಸ ಪ್ರತಿಗಳಲ್ಲಿ ಆ ಪದಗಳಿಲ್ಲ ಎಂದು ಹೇಳಿದರು.
ಸಂವಿಧಾನದ ಪೀಠಿಕೆಯಲ್ಲಿ ಸೋಷಲಿಸ್ಟ್ (ಸಮಾಜವಾದಿ) ಮತ್ತು ಸೆಕ್ಯುಲರ್ (ಜಾತ್ಯತೀತ) ಪದಗಳಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದರು. ನೂತನ ಸಂಸತ್ ಭವನ ಉದ್ಘಾಟನೆ ಸಂದರ್ಭ ನಡೆದ ಸಭೆಗಳಲ್ಲಿ ನೂತನ ಸಂವಿಧಾನದ ಪುಸ್ತಕಗಳನ್ನು ಸಂಸದರಿಗೆ ಹಸ್ತಾಂತರಿಸಲಾಗಿತ್ತು.
1976ರಲ್ಲಿ, ಸಾಂವಿಧಾನಿಕ ತಿದ್ದುಪಡಿಯ ಮೂಲಕ, ಜಾತ್ಯತೀತ ಮತ್ತು ಸಮಾಜವಾದಿ ಪದಗಳನ್ನು ಪೀಠಿಕೆಯಲ್ಲಿ ಸೇರಿಸಲಾಯಿತು. ಆದರೆ ಈಗಿರುವ ಸಂವಿಧಾನ ಪುಸ್ತಕದಲ್ಲಿ ಆ ಪದಗಳಿಲ್ಲದಿರುವುದರಿಂದ ಸರ್ಕಾರದ ಉದ್ದೇಶ ಅನುಮಾನಾಸ್ಪದವಾಗಿದೆ. ಈ ವಿಷಯವನ್ನು ಪ್ರಸ್ತಾಪಿಸಲು ಬಯಸಿದ್ದರೂ ಅವರ ಮನವಿಯನ್ನು ನಿರ್ಲಕ್ಷಿಸಲಾಗಿದೆ ಎಂದು ಅವರು ಹೇಳಿದರು.