ಕಲಬುರ್ಗಿ: ಶಾಸಕ ಡಾ. ಅಜಯ್ ಸಿಂಗ್ ಅವರ ನಿವಾಸದ ಆವರಣದಲ್ಲಿ ಗುರುವಾರ ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ವಾಚ್ ಮನ್ ಶವ ಪತ್ತೆಯಾಗಿದೆ. ಡಾ. ಅಜಯ್ ಸಿಂಗ್ ಅವರ ಮನೆಯ ವಾಚ್‌ಮ್ಯಾನ್ ಆಗಿದ್ದ ದೇವೇಂದ್ರ(32) ಎಂಬುವವರು ಮೃತಪಟ್ಟವರು. ತಾಲ್ಲೂಕಿನ ಪಟ್ಟಣ ಗ್ರಾಮದ ನಿವಾಸಿಯಾದ ದೇವೇಂದ್ರ ಅವರು ನಾಲ್ಕೈದು ವರ್ಷಗಳಿಂದ ಡಾ.ಅಜಯ್ ಸಿಂಗ್ ಅವರ ಮನೆಯಲ್ಲಿ ವಾಚ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಬುಧವಾರ ತಡ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಗುರುವಾರ ಬೆಳಿಗ್ಗೆ ಅಜಯ್ ಸಿಂಗ್ ಅವರ ಮನೆಯ ಅಡುಗೆ ತಯಾರಕ ಮರದಲ್ಲಿನ ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಸ್ಥಳೀಯರು ಹೇಳಿದ್ದಾರೆ. ಸ್ಥಳಕ್ಕೆ ಬ್ರಹ್ಮಪೂರ ಪೊಲೀಸರು ಭೇಟಿ ಪರಿಶೀಲಿಸಿದರು. ಕೆಕೆಆರ್‌ಡಿಬಿ ಅಧ್ಯಕ್ಷರೂ ಅಗಿರುವ ಅಜಯ್ ಸಿಂಗ್ ಅವರು ಪ್ರಸ್ತುತ ಬೆಂಗಳೂರಿನಲ್ಲಿ ಇದ್ದಾರೆ. ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.